Saturday, 14th December 2024

ಕಳಪೆ ಕಾಮಗಾರಿ: ಮತ್ತೊಮ್ಮೆ ಮುಚ್ಚಿದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ..!

ಬೆಂಗಳೂರು: ಸಂಚಾರಕ್ಕೆ ಮುಕ್ತವಾಗಿ ಒಂದು ವಾರದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ಮುಚ್ಚಿದೆ.

ಬಿಬಿಎಂಪಿಯು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಹೃದಯಭಾಗದಲ್ಲಿನ ಶಿವಾನಂದ ವೃತ್ತದಲ್ಲಿ ನಿರ್ಮಾಣಗೊಂಡಿರುವ ಉಕ್ಕಿನ ಮೇಲ್ಸೇತುವೆಯು ಬರೋಬ್ಬರಿ 5 ವರ್ಷ ಗಳ ಬಳಿಕ ವಾಹನ ಸಂಚಾರಕ್ಕೆ ಸೋಮವಾರ ದಿಂದ (ಆಗಸ್ಟ್ 15) ಮುಕ್ತವಾಗಿತ್ತು. ಶೇಷಾದ್ರಿಪುರದಿಂದ ರೇಸ್‌ಕೋರ್ಸ್‌ ಕಡೆಗಿನ ಮೇಲ್ಸೇ ತುವೆಯ ಒಂದು ಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡ ಲಾಗಿತ್ತು. ಇನ್ನೊಂದು ಬದಿಯಲ್ಲಿ ಕಾಮಗಾರಿ ಮುಗಿದಿಲ್ಲ. ಶೇಷಾದ್ರಿಪುರ ಕಡೆಗಿನ ಡೌನ್‌ರಾರ‍ಯಂಪ್‌ ಬಳಿ ಕಲ್ವರ್ಟ್‌ ಕಾಮಗಾರಿ ಕೈಗೊಳ್ಳಲಾಗಿದೆ.

ಹೀಗಾಗಿ, ಸ್ಪ್ಯಾಬ್‌ ಅಳವಡಿಕೆ, ಡಾಂಬರೀಕರಣ ಕಾಮಗಾರಿ ಪೂರ್ಣಕ್ಕೆ 10-15 ದಿನಗಳು ಬೇಕಾಗಲಿವೆ. ಆನಂತರಷ್ಟೇ ಪೂರ್ಣ ಮೇಲ್ಸೇತುವೆಯು ವಾಹನ ಸಂಚಾರಕ್ಕೆ ಮುಕ್ತ ವಾಗಲಿದೆ. ಆದರೆ ಶೇಷಾದ್ರಿಪುರದಿಂದ ರೇಸ್‌ಕೋರ್ಸ್‌ ಕಡೆಗಿನ ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಒಂದು ವಾರದಲ್ಲೇ ಮತ್ತೆ ಮುಚ್ಚಲಾಗಿದೆ.

ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವು 2017ರ ಜೂ. 24ರಂದು ಅನುಮೋದನೆ ನೀಡಿತು. ಕೊನೆಗೂ, ಉಕ್ಕಿನ ಮೇಲ್ಸೇತುವೆ ಕಾಮಗಾರಿಯು ಪೂರ್ಣ ಗೊಳ್ಳುವ ಹಂತ ತಲುಪಿತ್ತಾದರೂ ಸಂಚಾರಕ್ಕೆ ಅನುವು ಮಾಡಿಕೊಟ್ಟ ಒಂದು ವಾರದಲ್ಲೇ ಮತ್ತೆ ಬಂದ್ ಮಾಡಲಾಗಿದೆ.

ಈ ಮೇಲ್ಸೇತುವೆಯಿಂದ ಶಿವಾನಂದ ವೃತ್ತದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್‌ ಜಾಮ್‌ನ ನರಕವ್ಯೂಹದಿಂದ ಸವಾರರು ಮುಕ್ತಿ ಪಡೆದಿದ್ದರು. ಮೆಜೆಸ್ಟಿಕ್‌ ಕಡೆಯಿಂದ ಕುಮಾರಕೃಪಾ ರಸ್ತೆ ಮಾರ್ಗವಾಗಿ ಬಳ್ಳಾರಿ ರಸ್ತೆಕಡೆ ತೆರಳುವವರು, ಚಾಲುಕ್ಯ ವೃತ್ತದಿಂದ ಮಲ್ಲೇಶ್ವರ, ಶೇಷಾದ್ರಿಪುರ ಕಡೆಯಿಂದ ವಿಧಾನಸೌಧದ ಕಡೆ ಸಾಗುವವರು ದಟ್ಟಣೆಯ ಕಿರಿಕಿರಿ ಇಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದಾಗಿತ್ತು.