Sunday, 23rd June 2024

ಭೂದಾನ ಚಳುವಳಿಯ ಹರಿಕಾರ ವಿನೋಬಾ ಭಾವೆ ಭೇಟಿ ನೀಡಿದ ಸ್ಥಳದಲ್ಲಿ ಧ್ವಜಾರೋಹಣ

ತಿಪಟೂರು: ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಮಹನೀಯರನ್ನು ನೆನಪಿಸಿಕೊಂಡು ಹೊರಾಟಗಾರ ಜೀವನ ಚರಿತ್ರೆಯನ್ನು ತಿಳಿದು ಅವರ ವ್ಯಕ್ತಿತ್ವವನ್ನು ನಮ್ಮಲ್ಲಿ ರೂಢಿಸಿ ಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ದೇವನಂದ್‌ಸಿದ್ದಾಪುರ ತಿಳಿಸಿದರು.

ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿವತಿಯಿ0ದ ಸಿದ್ದಾಪುರ ಗ್ರಾಮದಲ್ಲಿ ಭೂ ದಾನ ಚಳುವಳಿಯ ಹರಿಕಾರ ಭಾರತ ರತ್ನ ವಿನೋಬಾ ಭಾವೆ ಭೇಟಿ ನೀಡಿದ ಸ್ಥಳದಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಅಭಿವೃದ್ದಿ ಪಡಿಸಿದ ಅಮೃತ ಸರೋವರ ಯೋಜನೆ ಯ ಬಳಿ ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಧ್ವಜರೋಹಣ ನೇರವೇರಿಸಿ ಮಾತ ನಾಡಿದರು.

ದೇಶಕ್ಕೆ ಹಲವಾರು ವ್ಯಕ್ತಿಗಳ ಪರಿಶ್ರಮ ಬಲಿದಾನದ ಮೂಲಕ ದೇಶಕ್ಕೆ ಸ್ವತಂತ್ರ ಲಭಿ ಸಿದ್ದು, ಅಂತಹವರಲ್ಲಿ ಗಾಂಧೀಜಿಯವರು ಪ್ರಮುಖರಾಗಿದ್ದರು, ನಾವೆಲ್ಲರೂ ತಮ್ಮ ತಮ್ಮ ಗ್ರಾಮಗಳ ಅಭಿವೃದ್ದಿ ಮಾಡಿದಾಗ ಬಲಿಷ್ಠ ಭಾರತವನ್ನು ಕಟ್ಟಲು ಸಾದ್ಯವಾಗು ತ್ತದೆ ಎಂದರು.

ಪoಚಾಯಿತಿಯ ಪಿಡಿಒ ಗೋಪಿನಾಥ್ ಮಾತನಾಡಿ ಮನರೇಗಾ ಯೋಜನೆಯಡಿಯಲ್ಲಿ ಹಲವಾರು ಕಾಮಗಾರಿಗಳನ್ನು ಮಾಡ ಬಹುದಾಗಿದ್ದು ರೈತರು ಹಾಗೂ ಸಾರ್ವಜನಿಕರು ಪಂಚಾಯಿತಿ ಅಗತ್ಯ ದಾಖಾಲಾತಿಗಳನ್ನು ನೀಡಿ ತಮ್ಮ ಜಮೀನು ಹಾಗೂ ಗ್ರಾಮದ ಸಮುದಾಯ, ವೈಯುಕ್ತಿಕ ಕಾಮಗಾರಿಗಳನ್ನು ಮಾಡಿ ಸುಂದರ ಗ್ರಾಮವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸಬಲ ರಾಗಬಹುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ಮತ್ತಿಹಳ್ಳಿದೇವರಾಜ್ ಯುವಕರಲ್ಲಿ ದೇಶದ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ಬೋಧನೆಯನ್ನು ಮಾಡಿದಾಗ ಸೈನ್ಯಕ್ಕೆ ಸೇರಬಯಸುವ ಆಸೆಯು ಚಿಗರೂಡೆಯುತ್ತದೆ, ಪ್ರತಿಯೊಬ್ಬ ವ್ಯಕ್ತಿಯು ದೇಶದ ಇತಿಹಾಸ ಚರಿತ್ರಯನ್ನು ತಿಳಿದುಕೊಂಡಾಗ ಮಾತ್ರ ರಾಷ್ಟçಭಿಮಾನ ಮೂಡಲು ಸಾಧ್ಯವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಗ್ರಾಮದಲ್ಲಿ ದೇಶ ಸೇವೆ ಮಾಡಿ ನಿವೃತ್ತರಾದ ಮಾಜಿ ಸೈನಿಕರಾದ ದೇವರಾಜ್, ಮಹೇಶ್, ಶಿವರಾಮ್, ಅಶೋಕ್, ನಿವೃತ್ತ ಪೋಲಿಸ್ ಅಧಿಕಾರಿ ಪಾಪಯ್ಯ ಇವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ವಿಜಯಕುಮಾರಿ ವೆಂಕಟೇಶ್, ಉಪಾಧ್ಯಕ್ಷ ನಟರಾಜು, ಸದಸ್ಯರಾದ ಮಾಧುಸ್ವಾಮಿ, ಚನ್ನಬಸವಯ್ಯ, ಹರೀಶ್ ಎಮ್.ಪಿ, ರಮೇಶ್, ಹರೀಶ್ ಗೌಡ, ಪವಿತ್ರರಘು, ತಿಮ್ಮಣ್ಣ, ರೇಣುಕಮ್ಮಒಂಕಾರಮೂರ್ತಿ, ವಸಂತ ಕುಮಾರಿ, ಶಿಲ್ಪ, ರೈತರಾದ ಪುಟ್ಟಣ್ಣ, ಜಯಣ್ಣ, ಕೇಶವ್, ಪಟೇಲ್ ರಘು, ತಾಪಂ ಮಾಜಿ ಸದಸ್ಯ ಸುರೇಶ್ ಹಾಜರಿದ್ದು, ನಿವೃತ್ತ ಶಿಕ್ಷಕ ಎಸ್.ಆರ್, ಸ್ವಾಮಿ ಕರ‍್ಯಕ್ರಮ ನಿರೂಪಿಸಿ, ವಕೀಲ ದೇವರಾಜ್ ವಂದಿಸಿದರು,

Leave a Reply

Your email address will not be published. Required fields are marked *

error: Content is protected !!