
ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರ ಜೀವನದ ವಿವರಣೆ ನೀಡಿ ಪ್ರಶ್ನೆ ಮಾಡಿರುವ ಸಮೀರ್, ಮಾತಿಗೊಮ್ಮ ಜಾತಿ ಎಳೆದು ಬ್ರಾಹ್ಮಣರನ್ನು ಅಲ್ಲಗೆಳೆಯುತ್ತಿದ್ದಿರಿ. ಎಲ್ಲ ಬ್ರಾಹ್ಮಣರು ತಪ್ಪು ಮಾಡಿದ್ದಾರೆಯೇ? ಯಾರೋ ಒಬ್ಬರು ತಪ್ಪು ಮಾಡಿದ್ದನ್ನು ಎಲ್ಲರಿಗೂ ಚುಚ್ಚಿ ಮಾತನಾಡುತ್ತೀರಿ. ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿದ್ದವರು ಬಿ.ಆರ್ ಅಂಬೇಡ್ಕರ್. ಅವರ ಸಮಿತಿಯಲ್ಲಿ ಯಾರ‍್ಯಾರು ಇದ್ದರೂ ನಿಮಗೆ ಗೊತ್ತೆ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಬ್ರಾಹ್ಮಣರ ಹೆಸರು ಹೇಳಿ ಸಮೀರ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮಲ್ಲಿ ಜಾತಿ, ಭೇದಭಾವ ಪಂತ ಬರಬಾರದು. ಸಭೆಯೋಳಗೆ ಚಪ್ಪಾಳೆಗಾಗಿ ಭಾಷಣ ಮಾಡೋದನ್ನ ಬಂದ್ ಮಾಡಿ. ಸತ್ಯ, ಅಸತ್ಯದ ಬಗ್ಗೆ ನಿಖರವಾದ ಪರಾಮರ್ಶೆ ಮಾಡಿ. ಬ್ರಾಹ್ಮಣರನ್ನು ನಿಂದನೆ ಮಾಡೋದು ಬಿಡಿ ಎಂದ ಸಮೀರ್ ಹೇಳಿದರು.
ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರಹಾಕಿದ ಸಮೀರ್, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನು ಜಾಚಾರ್ಯರಿಂದ ಸಾಮಾಜಿಕವಾಗಿ ನ್ಯಾಯ ಕೊಟ್ಟಿಲ್ಲ. ಕೇವಲ ಭಕ್ತಿ, ಜ್ಞಾನದ ಪರಂಪರೆಯ ಚಳುವಳಿ ನಡೆದಿದೆ. ಸಮಾಜ ದೊಳಗೆ ನಿಮಗೆ ನ್ಯಾಯ ಮೂನ್ನೂರು ಕೋಟಿ ಕಲ್ಲಿನ ದೇವರುಗಳಿಂದಲೂ ಸಿಕ್ಕಿಲ್ಲ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ನಿಮಗೆ ನ್ಯಾಯ ಸಿಕ್ಕಿದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.