Tuesday, 20th February 2024

ಬೆಲಗೂರು ಮಾರುತಿ ಪೀಠಾಧ್ಯಕ್ಷ ಬಿಂದು ಮಾಧವ ಶರ್ಮ ವಿಧಿವಶ

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಬೆಲಗೂರು ಮಾರುತಿ ಪೀಠಾಧ್ಯಕ್ಷರಾದ ಬಿಂದು ಮಾಧವ ಶರ್ಮ (75) ಬೆಂಗಳೂರಿನಲ್ಲಿ ಶುಕ್ರವಾರ ವಿಧಿವಶರಾದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಮಠದ ಮೂಲಗಳು ಮಾಹಿತಿ ನೀಡಿವೆ.

ಮೂಲತಃ ಬೆಲಗೂರಿನ ಬಿಂದು ಮಾಧವ ಶರ್ಮ ಆಂಜನೇಯನ ಆರಾಧಕರು. ರಾಜ್ಯದ ಹಲವೆಡೆ ಸಾವಿರಾರು ಭಕ್ತರನ್ನು ಹೊಂದಿದ್ದಾರೆ. ಪಾರ್ಥಿವ ಶರೀರವನ್ನು ಸಂಜೆ  ಬೆಲಗೂರಿಗೆ ತರಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!