Saturday, 14th December 2024

ಪಕ್ಷ ಬಿಟ್ಟು ಹೋದವರು ಒಂದು ವಾರದಲ್ಲಿ ವಾಪಸ್ ಬರುತ್ತಾರೆ: ಸಿಎಂ ಬೊಮ್ಮಾಯಿ

ಬಾಗಲಕೋಟೆ : ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಬಿಜೆಪಿ ಬಿಟ್ಟು ಹೋದವರು ಒಂದು ವಾರದಲ್ಲಿ ಮತ್ತೆ ವಾಪಸ್ ಬರುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರುಣದಿಂದ ಮುಧೋಳದವರೆಗೆ ಬಿಜೆಪಿ ಸುನಾಮಿ ಎದ್ದಿದೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಕಾಂಗ್ರೆಸ್ ನವರು ದ್ರೋಹಿಗಳು, ಈಗ ಕಾಂಗ್ರೆಸ್ ಗೆ ಹೋದವರು ಮುಳಗುವ ದೋಣಿ ಏರಿದ್ದಾರೆ. ಬಿಜೆಪಿ ಬಿಟ್ಟು ಹೋದವರು ಒಂದು ವಾರದಲ್ಲಿ ಪುನಃ ವಾಪಸ್ ಬರ್ತಾರೆ ಎಂದು ಹೇಳಿದ್ದಾರೆ.

ನಾಮಪತ್ರ ಸಲ್ಲಿಕೆ ಮುಗಿಯುವರೆಗೆ ಸುದೀಪ್ ಪ್ರಚಾರ ಮಾಡಲ್ಲ. ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ಪ್ರಚಾರ ಮಾಡ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಕೈತಪ್ಪಲು `ಬಿ.ಎಲ್.ಸಂತೋಷ್’ ಕಾರಣ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್‌ ‌ ಕಾಂಗ್ರೆಸ್‌ʼ ಪಕ್ಷ ಸೇರ್ಪಡೆಯಿಂದ ಯಾವುದೇ ತೊಂದರೆ ಇಲ್ಲ.

ಬಿಜೆಪಿ ಪಕ್ಷವೂ ಯಾರ ಕಪಿಮುಷ್ಟಿಯಲ್ಲೂ ಇಲ್ಲ. ಬಿಜೆಪಿಯಲ್ಲಿ ಯಾರಿಗೆ ಯಾರೂ ಟಿಕೆಟ್‌ ತಪ್ಪಿಸಿಲ್ಲ. ಹೈಕಮಾಂಡ್‌ ಲೆಕ್ಕಾಚಾರ ಹಾಕಿ ಟಿಕೆಟ್‌ ನೀಡಿದೆ ಎಂದುಶೆಟ್ಟರ್ ಆರೋಪಕ್ಕೆ ಮುಧೋಳದಲ್ಲಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.