Friday, 1st December 2023

ಟೈರ್ ಸ್ಫೋಟ: ಹಳ್ಳಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್

#KSRTCBUS@Ramanagar

ರಾಮನಗರ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟೈರ್ ಸ್ಫೋಟಗೊಂಡು ಹಳ್ಳಕ್ಕೆ ಉರುಳಿದ ಘಟನೆ ಶುಕ್ರವಾರ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಗೌಡಗೆರೆ- ಬುಗಡನದೊಡ್ಡಿ ಮಾರ್ಗ ಮಧ್ಯೆ ಟೈರ್ ಸ್ಫೋಟಗೊಂಡು ಕೆಎಸ್‌ಆರ್‌ ಟಿಸಿ ಬಸ್ ರಸ್ತೆ ಬದಿಯ ಹಳ್ಳದಲ್ಲಿ ಹೋಗಿ ನಿಂತಿದೆ.

ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಬಸ್‌ನ ಟೈರ್ ಅನ್ನು ಬದಲಿಸಿರಲಿಲ್ಲ. ಬಸ್ ಹಳ್ಳಕ್ಕೆ ಹೋಗಿ ದ್ದರೂ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾ ಹುತ ತಪ್ಪಿದೆ.

error: Content is protected !!