Saturday, 27th July 2024

ಕರೋನಾ ಪ್ರಕರಣ ಹೆಚ್ಚಿದರೆ ಕಾಲೇಜು, ಹಾಸ್ಟೆಲ್, ಪಿ ಜಿ ಮುಚ್ಚಿ: ಬಿಬಿಎಂಪಿ ಆದೇಶ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ನರ್ಸಿಂಗ್, ಇನ್ನಿತರೆ ಕಾಲೇಜ್, ಸಂಬಂಧ ಪಟ್ಟ ಹಾಸ್ಟೆಲ್ ಹಾಗೂ ಪಿ ಜಿಗಳಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಯಂತ್ರಣ ಕ್ರಮವಾಗಿ ಅಂತಹ ಕಾಲೇಜು, ಹಾಸ್ಟೆಲ್, ಪಿಜಿಗಳನ್ನು ಮುಚ್ಚುವಂತೆ ಬಿಬಿಎಂಪಿ ಆದೇಶಿಸಿದೆ.

ಪಾಲಿಕೆಯ ಎಲ್ಲಾ ವಲಯದ ಆಯುಕ್ತರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಗರದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ನರ್ಸಿಂಗ್ ಕಾಲೇಜು, ಇನ್ನಿತರೆ ಹಾಸ್ಟೆಲ್ ಹಾಗೂ ಪಿ ಜಿ ಗಳಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ.

ಈ ಹಿನ್ನಲೆಯಲ್ಲಿ ನರ್ಸಿಂಗ್ ಕಾಲೇಜ್, ಇನ್ನಿತರೆ ಕಾಲೇಜ್ ಗಳು, ಹಾಸ್ಟೆಲ್ ಹಾಗೂ ಪಿ ಜಿ ಗಳಲ್ಲಿ ಇರುವ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟರೆ, ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸುವಂತೆ, ಕೋವಿಡ್ ಲಸಿಕೆ ಪಡೆಯುವಂತೆ ಸೂಚಿಸುವಂತೆ ತಿಳಿಸಿದ್ದಾರೆ.

error: Content is protected !!