Saturday, 27th July 2024

ನಾಲ್ಕೂ ಸಾರಿಗೆ ನಿಗಮಗಳಿಗೂ ತುಟ್ಟಿಭತ್ಯೆ ಶೇ.24.50ಗೆ ಏರಿಕೆ : ಕೆ ಎಸ್ ಆರ್ ಟಿ ಸಿ

ಬೆಂಗಳೂರು: ಕೆ ಎಸ್ ಆರ್ ಟಿ ಸಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೂ ಅನ್ವಯಿಸಿ ತುಟ್ಟಿಭತ್ಯೆಯನ್ನು ಆದೇಶಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಇತ್ತೀಚೆಗೆ ರಾಜ್ಯ ಸರ್ಕಾರ ತುಟ್ಟಿಭತ್ಯೆ ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಆದೇಶಿಸಿತ್ತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆ ಗಾರರು ಸುತ್ತೋಲೆ ಹೊರಡಿಸಿದ್ದು, ಅ.27-ರಂದು ರಾಜ್ಯ ಸರ್ಕಾರವು ದಿನಾಂಕ ಜು.01ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಆದೇಶಿಸಿರುತ್ತದೆ.

ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಸಾರಿಗೆ ನಿಗಮದಗಳಲ್ಲಿ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನ ಗೊಳಿಸಿ, ಪಾವತಿಸಲು ಆದೇಶಿಸಿರುವ ಪ್ರಯುಕ್ತ, ಈ ಕೆಳಕಂಡಂತೆ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಅಕ್ಟೋಬರ್ ತಿಂಗಳ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.21.50ರಿಂದ ಶೇ.24.50ಕ್ಕೆ ಹೆಚ್ಚಿಸಿ ಅನುಷ್ಠಾನ ಗೊಳಿಸಿ ಪಾವತಿಸುವುದು.

ಜುಲೈ 2021ರಿಂದ ಸೆಪ್ಚೆಂಬರ್ 2021ರವರೆಗಿನ 3 ತಿಂಗಳ ತುಟ್ಟಿಭತ್ಯೆ ಹಿಂಬಾಕಿಯ ಒಂದೊಂದು ಕಂತನ್ನು ನವೆಂಬರ್ 2021 ರಿಂದ ಜನವರಿ 2022ರ ಮಾಹೆಯ ವೇತನದಲ್ಲಿ ಸೇರಿಸಿ ಪಾವತಿಸುವುದು.

ಜುಲೈ 2021ರಿಂದ ಸೆಪ್ಟೆಂಬರ್ 2021ರ ಅವಧಿಯಲ್ಲಿ ಸೇವಾವಿಮುಕ್ತಿ ಹೊಂದಿದವರಿಗೆ ಲಭ್ಯವಿರುವ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ( ಸಂಸ್ಥೆಗೆ ಬರಬೇಕಾದ ಬಾಕಿ ಮೊತ್ತ ಇದ್ದಲ್ಲಿ ಕಡಿತ ಮಾಡಿಕೊಂಡು ) ಧನಾದೇಶಗಳ ಮುಖಾಂತರ ದಿನಾಂಕ 25-11-2021ರಂದು ಪಾವತಿಸುವುದು.

ಅಕ್ಟೋಬರ್ 2021 ರಿಂದ ಡಿಸೆಂಬರ್ 2021ರವರೆಗಿನ ಮಾಹೆಗಳಲ್ಲಿ ಸೇವಾವಿಮುಕ್ತಿ ಹೊಂದುವವರಿಗೆ ಬಾಕಿ ಇರುವ ಪೂರ್ಣ ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ನಿವೃತ್ತಿ ಮಾಹೆಯ ವೇತನದಲ್ಲಿ ಸೇರಿಸಿ ಪಾವತಿಸಬಹುದಾಗಿ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!