Wednesday, 30th October 2024

ಅಗ್ನಿ ಅವಘಡ ಮುಂಜಾಗೃತಾ ಅರಿವು ಅಗತ್ಯ

“ಮಸೂತಿ ಗುರು ಸಂಗನಬಸವೇಶ್ವರ ಶಾಲೆ ಆವರಣ ಕೂಡಗಿ NTPC ಅಗ್ನಿಶಾಮಕ ದಳದ ವತಿಯಿಂದ ಜಾಗೃತಿ ಕಾರ್ಯಕ್ರಮ”

ಕೊಲ್ಹಾರ: ಆಕಸ್ಮಿಕವಾಗಿ ಅಗ್ನಿ ಅವಘಡವಾದಾಗ ಭಯಪಡದೆ ನೀರು ಗಿಡದ ತಪ್ಪಲು, ಮಣ್ಣು ಬಳಸಿ ಬೆಂಕಿ ನಂದಿಸಿ ಮುಂದಾಗುವ ಅನಾಹುತ ತಪ್ಪಿಸ ಬಹುದು ಎಂದು NTPC ಸಿ ಆಯ್ ಎಸ್ ಎಫ್ ನ ಅಗ್ನಿಶಾಮಕ ದಳದ ಫೈರ್ ಹೆಡ್ ಕಾನ್ಸ್ಟೆಬಲ್ ಬಿನ್ನಾಳ ಈಶ್ವರ ತಿಳಿಸಿದರು.

ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಜಗದೀಶ ಸಾಲಳ್ಳಿ ವಿನಂತಿ ಮೇರೆಗೆ ಅಗ್ನಿಶಾಮಕ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತೆ ಹಾಗೂ ಅಗ್ನಿ ಅವಘಡ ಮುಂಜಾಗೃತಾ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾಹಿತಿ ನೀಡಿದರು.

ಬೇಸಿಗೆ ರಜೆಯಲ್ಲಿರುವ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅಣುಕು ಪ್ರದರ್ಶನ ಹಾಗೂ ಬೆಂಕಿ ನಂದಿಸುವ ಸಲಕರಣೆ ಬಳಸುವ ವಿಧಾನ,ಮನೆಯಲ್ಲಿ ಎಲ್ ಪಿ ಜಿ ಗ್ಯಾಸ್ ಸೋರಿಕೆ ಸಂಧರ್ಭದಲ್ಲಿ ನಾವು ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿ ದರು.

 

ಶಿಕ್ಷಕ ಜಗದೀಶ ಸಾಲಳ್ಳಿ ಮಾತನಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಆಕಸ್ಮಿಕವಾಗಿ ಸಂಭವಿಸುವ ಅಗ್ನಿ ಅನಾಹುತ ತಪ್ಪಿಸಲು ಜೀವದ ಹಂಗು ತೊರೆದು ನಮ್ಮೆಲ್ಲರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅವರ ಕಾರ್ಯ ಶ್ಲಾಘನೀಯ ಜೊತೆಗೆ ಮಕ್ಕಳು ಹಾಗೂ ಜನರಲ್ಲಿ ಅರಿವು ಮೂಡಿಸುವುದರಿಂದ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಬಹುದು ಈ ಜಾಗೃತಿ ಮಕ್ಕಳಿಗೆ ಅಗತ್ಯ ವಾಗಿತ್ತು ಎಂದರು.

ಅಗ್ನಿಶಾಮಕ ದಳದ ಪೇದೆಗಳಾದ ಆಯ್.ಪಿ ಮುತ್ತನ್ನವರ, ಸಿ.ಎ ಗೂಗಿಹಾಳ, ಚಾಲೆಂಜ ಕೊಚಿಂಗ್ ಕ್ಲಾಸಿಸ್ ನ ಮಲ್ಲಿಕಾರ್ಜುನ ಪಾಟೀಲ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಗೌರವಿಸಿ ಸನ್ಮಾನಿಸ ಲಾಯಿತು.