Saturday, 27th July 2024

ಕಾರು ಪಾರ್ಕಿಂಗ್‌ ಸ್ಥಳ ಬಿಟ್ಟು, ಉಳಿದೆಡೆ ಡಾಮರೀಕರಣ ಮಾಡಿದ್ದು ವೈರಲ್‌

ಮಂಗಳೂರು: ನಗರ ಪ್ರದೇಶಗಳಲ್ಲಿ ಗಿಡ ಮರಗಳಿಗೆ ಹಾನಿ ಮಾಡದೆ ಎರಡು ಮೂರು ಅಂತಸ್ತಿನ ಮನೆ ಕಟ್ಟುವುದಿದೆ. ಈ ಮೂಲಕ ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ.

ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮುಖ್ಯ ರಸ್ತೆಯಲ್ಲಿ ಡಾಮರೀಕರಣ ನಡೆಯುತ್ತಿದ್ದು, ಈ ಸಂದರ್ಭ ಕಾರೊಂದು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ ಕಾರಣ ಅಷ್ಟು ಸ್ಥಳಾವಕಾಶ ಬಿಟ್ಟು ಡಾಮರೀಕರಣ ಕಾಮಗಾರಿ ಮುಂದುವರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಟ್ಲದ ಶಾಲಾ ರಸ್ತೆಯಿಂದ ಮೇಗಿನಪೇಟೆ ವರೆಗೆ ರಸ್ತೆ ಡಾಮರೀಕರಣ ನಡೆಯುತ್ತಿದೆ. ವಿಟ್ಲದ ಎಲಿಮೆಂಟರಿ ಶಾಲೆಯ ಮುಂಭಾಗ ಕಾರೊಂದು ಪಾರ್ಕಿಂಗ್ ಮಾಡಿದ್ದರಿಂದ ಆ ಸ್ಥಳದಲ್ಲಿ ಡಾಮರೀಕರಣ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಕಾರು ನಿಂತಿದ್ದ ಸ್ಥಳವನ್ನು ಬಿಟ್ಟು ಅದರ ಹೊರ ಭಾಗದಲ್ಲಿ ಡಾಮರೀಕರಣ ಮಾಡಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕಾಗಿ ಎಂಜಿನಿಯರ್‌ ಕೆಲಸದ ವಿರುದ್ದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!