Wednesday, 11th December 2024

ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ 

ತುಮಕೂರು: ಹೊರಪೇಟೆಯ ಶ್ರೀನೀಲಕಂಠೇಶ್ವರಸ್ವಾಮಿ ಸೇವಾ ಟ್ರಸ್ಟ್  ವತಿಯಿಂದ ಲೋಕ ಕಲ್ಯಾಣಕ್ಕಾಗಿ ಡಿ.10ರ ಭಾನುವಾರ ಚಂಡಿಕಾ ಹೋಮ ಮತ್ತು ಡಿ.11 ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಶ್ರೀನೀಲಕಂಠೇಶ್ವರಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಚ್.ರಾಮಚಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಡಿ.11 ರ ಸೋಮವಾರ ಸಂಜೆ 6.30ಕ್ಕೆ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದಸರಸ್ವತಿ ಸ್ವಾಮೀಜಿ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಜಿ.ಸೋಮಶೇಖರ್ ವಹಿಸ ಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಲಿದ್ದಾರೆ ಎಂದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಟಿ.ಪಿ.ನರಸಿಂಹಮೂರ್ತಿ ಮಾತನಾಡಿ, ಶ್ರೀನೀಲಕಂಠೇಶ್ವರ ದೇವಾಲಯಕ್ಕೆ 525 ವರ್ಷಗಳ ಇತಿಹಾಸವಿದೆ. ಇಂದಿಗೂ ಮೂಲ ದೇವಾಲಯ ಕಲ್ಲಿನ ಮಂಟಪದಿಂದ ಕೂಡಿದೆ. 1977ರಲ್ಲಿ ಕೆಲ ಮಾರ್ಪಾಡು ಮಾಡಿ,ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
 ಟ್ರಸ್ಟಿ ಡಾ.ಎನ್.ವೆಂಕಟೇಶ್ ಮಾತನಾಡಿ, ಕಾರ್ತಿಕ ಮಾಸದಲ್ಲಿ ಸುಮಾರು ಒಂದು ತಿಂಗಳ ಕಾಲ ಹಲವು ಪೂಜಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ಪ್ರತಿದಿನ ಅಭಿಷೇಕ,ಪ್ರಸಾದ ವಿನಿಯೋಗವಿರುತ್ತದೆ. ಹಾಸನ, ಚನ್ನರಾಯಪಟ್ಟಣ, ದಾಬಸ್‌ಪೇಟೆ, ಬೆಂಗಳೂರು ಗ್ರಾಮಾಂತರಗಳಿಂದ ಭಕ್ತರು ಬಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡುತಿದ್ದಾರೆ ಎಂದರು.
ಈ ವೇಳೆ ಟ್ರಸ್ ಖಜಾಂಚಿ ಬಿ.ಕಮಲಾಕರ, ಉಪಾಧ್ಯಕ್ಷರಾದ ಎಸ್.ಎನ್.ಬಸವರಾಜು, ಕುರುಹಿನ ಶೆಟ್ಟಿ ಸಂಘದ ಜಿಲ್ಲಾಧ್ಯಕ್ಷರಾದ ಟಿ.ಎಂ. ಯೋಗಾನಂದ್, ನಿರ್ದೇಶಕರಾದ ಕೆ.ಎಚ್.ಶಿವಶಂಕರ್, ಎಸ್.ಆರ್.ಸೋಮಶೇಖರ್, ಪ್ರಧಾನ ಆರ್ಚಕ  ಚಂದ್ರಶೇಖರ್ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.