Thursday, 22nd February 2024

HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿದ್ದ ಗಡುವು ವಿಸ್ತರಣೆ…!

ಬೆಂಗಳೂರು: ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿದ್ದ ಗಡುವು ಫೆಬ್ರವರಿ 17ಕ್ಕೆ ಮುಕ್ತಾಯವಾಗಲಿದ್ದು, ಅದನ್ನು ವಿಸ್ತರಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಏಕರೂಪ ನೋಂದಣಿ ಫಲಕ ಅಳವಡಿಕೆ, ವಾಹನಗಳ ಸುರಕ್ಷತೆ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ ಅಳವಡಿಸಿಕೆ ಕಡ್ಡಾಯಗೊಳಿಸಲಾಗಿದೆ. ಫೆ.17ರವರೆಗೆ HSRP ಅಳವಡಿಕೆಗೆ ಗಡುವು ನೀಡಲಾಗಿದೆ. ಇದುವರೆಗೆ ಕಡಿಮೆ ಸಂಖ್ಯೆಯ ವಾಹನಗಳ ಮಾಲೀಕರು HSRP ಅಳವಡಿಸಿಕೊಂಡಿದ್ದಾರೆ.

ಆನ್ಲೈನ್ ನಲ್ಲಿ ಬುಕಿಂಗ್ ವೇಳೆ ತಾಂತ್ರಿಕ ಸಮಸ್ಯೆ ಹೆಚ್ಚುರುವುದರಿಂದ ಮತ್ತೆ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಫೆ.17ರ ನಂತರವೂ HSRP ಅಳವಡಿಕೆಗೆ ಅವಕಾಶ ನೀಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!