Sunday, 8th September 2024

ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಜೆಇ ವಜಾಕ್ಕೆ ಸದಸ್ಯರ‌ ಆಗ್ರಹ

ರಾಯಚೂರು : ಕವಿತಾಳ ಪಟ್ಟಣದ ಬೇಜವಬ್ದಾರಿ ಮುಖ್ಯಾಧಿಕಾರಿ ಹಾಗೂ ಜೂನಿಯರ್ ಇಂಜಿನಿಯರ್ ರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಬೇರೆ ಅಧಿಕಾರಿಗಳನ್ನು ನೇಮಿಸಲು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಕವಿತಾಳ ಪಟ್ಟಣ ಪಂಚಾ ಯತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಣವು ಹದಿನಾರು ವಾರ್ಡಗಳನ್ನ ಒಳಗೊಂಡಿದೆ ಪ್ರತಿ ವಾರ್ಡ್ ನಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ಸ್ವಚ್ಛತೆ, ಶೌಚಾಲಯ, ರಸ್ತೆ ಸೇರಿದಂತೆ ಇತರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪಟ್ಟಣದಲ್ಲಿ ವಾರದ ದಿನ ಸಂತೆ ನಡೆಯುತ್ತದೆ. ಪಟ್ಟಣದ ಸುತ್ತಲು ಸುಮಾರು 25 ಕ್ಕೂ ಹೆಚ್ಚು ಹಳ್ಳಿಗಳಿಂದ ಜನರು ವ್ಯಾಪಾರ ವಹಿವಾಟಿಗೆ ಬರುತ್ತಾರೆ. ಶಿವಪ್ಪ ಮಠದ ಹತ್ತಿರದ ಹಳೆ ಬಸ್ ನಿಲ್ದಾಣ ಯಾವುದೇ ಸಾರ್ವಜನಿಕ ಶೌಚಾ ಲಯ ಇಲ್ಲದೇ ಇರೋದನ್ನ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

ಇದ್ದ ಶೌಚಾಲಯವನ್ನು ರಸ್ತೆ ಆಗಲೀಕರಣ ಸಮಯದಲ್ಲಿ ಹೊಡೆದು ಹಾಕಿದರು ಹಾಗೂ ಪಟ್ಟಣದ ಹೊಸ ಬಸ್ ನಿಲ್ದಾಣ ದಿಂದ ಎರಡನೆ ಪೆಟ್ರೋಲ್ ಬಂಕ್ ( ಲಿಂಗಸ್ಗೂರು ರಸ್ತೆ ) ವರೆಗೆ ವಿದ್ಯುತ್ ದೀಪಗಳಿಲ್ಲದೆ ಜನಸಾಮಾನ್ಯರು, ಮಹಿಳೆಯರು ಯುವತಿಯರು, ನಿತ್ಯ ರಾತ್ರಿ ನಡೆದಾಡಲು ಹೆದರುತ್ತಿದ್ದಾರೆ ಹೀಗೆ ಪಟ್ಟಯ ಅನೇಕ ಸಮಸ್ಯೆಗಳ ಕೂಡಿದೆ. ಈ ಸಮಸ್ಯೆಗಳನ್ನು ಕುರಿತು ಬಗೆಹರಿಸುವಂತೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಹೋಗಿ ಹೇಳಬೇಕೆಂದರೆ ಅವರು ಕಾರ್ಯಾಲಯಕ್ಕೆ ಬರುವುದಿಲ್ಲ ಯಾವತ್ತೋ ಬಂದಾಗ ಜನರಿಗೆ ಮೂಲ ಭೂತ ಸೌಕರ್ಯ ಒದಗಿಸಲು ಅನುದಾನ ಇಲ್ಲ, ನಿಮ್ಮಗೆ ಇನ್ನೂ ಅಧಿಕಾರ ಸಿಕ್ಕಿಲ್ಲ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ನಂತರ ನೀವು ಬಂದು ಕೇಳ ಬೇಕು ಎಂದು ನೆಪ ಹೇಳುತ್ತಾ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಈ ಮುಖ್ಯಾಧಿಕಾರಿ ಮತ್ತು ಜೂನಿಯರ್ ಇಂಜಿನಿಯರ್ ( ಜೆಇ ) ಮಲ್ಲಣ್ಣ ನೂತನವಾಗಿ ಆಯ್ಕೆಯಾದ ಯಾವೊಬ್ಬ ಪಟ್ಟಣ ಪಂಚಾಯಿತಿ ಸದಸ್ಯರ ಫೋನ್ ಕಾಲ್ ರಿಸೀವ್ ಮಾಡುವುದಿಲ್ಲ. ಕಚೇರಿ ಸರಿಯಾದ ಸಮಯಕ್ಕೆ ಬರುವುದಿಲ್ಲ ಇದರ ಪರಿಣಾಮವಾಗಿ ಪಂಚಾಯತ್ ಸಿಬ್ಬಂದಿಯು ಈ ಚಾಳಿ ಬಿದ್ದಿದೆ ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆ ಉಂಟಾಗಿದೆ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಜನರನ್ನು ಸತ್ತಾಸುತ್ತಾ ನಾಳೆ ಬಾ ನಾಡಿದ್ದು ಬಾ ಎಂದು ಕಳಿಸುತ್ತಾರೆ ಎಷ್ಟರಮಟ್ಟಿಗೆ ಅಂದರೆ ವಾಸಸ್ಥಳಕ್ಕೆ ಮತ್ತು ಮರಣ ಪ್ರಮಾಣ ಪತ್ರಕ್ಕೆ ತಿಂಗಳು ಗಟ್ಟಲೆ ತಿರುಗಿಸಿ ಹಣ ಪಡೆದು ಮಾಡಿಕೊಡುತ್ತಾರೆ.

ಪಟ್ಟಣ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಅಲಿಯಾಸ್ ಜೆ.ಟಿ ರೆಡ್ಡಿ ಮತ್ತು ಜೆಇ ಮಲ್ಲಣ್ಣ ಈ ಹಿಂದೆ ಶೌಚಾಲಯ ಹಗರಣದಲ್ಲಿ ಭಾಗಿಯಾಗಿ ಮುಖ್ಯ ಪಾತ್ರ ವಹಿಸಿ ಲಕ್ಷಾಂತರ ಹಣ ಲೂಟಿ ಮಾಡಿದ್ದರು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಯಲ್ಲಿ ವರದಿಯು ಸಾಕ್ಷಿ ಸಮೇತ ಬಹಿರಂಗವಾಗಿದೆ. ಆದರೂ ಅವರ ಮೇಲೆ ಸೂಕ್ತ ಕ್ರಮ ಜರುಗಿಸದೆ ಮೇಲಾಧಿಕಾರಿಯ ಆದೇಶವನ್ನು ಗಾಳಿಗೆ ತೂರಿ ರಾಜಕೀಯ ಪ್ರಭಾವದಿಂದ ಮತ್ತೆ ಇವರನ್ನೆ ಕವಿತಾಳ ಪಟ್ಟಣಕ್ಕೆ ಅವರನ್ನೇ ಮುಖ್ಯಾಧಿಕಾರಿಗಳಾಗಿ ಹಾಗೂ ಜೆಇಯಾಗಿ ನೇಮಿಸಿರುವುದರಿಂದ ಇವರಿಗೆ ಸಂಪೂರ್ಣ ಹಿಡಿತ ಸಿಕ್ಕು ಈಗ ಮತ್ತಷ್ಟು ಸಾರ್ವಜನಿಕರ ಹಣವನ್ನು ಲೂಟಿ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ.

ಹಾಗಾಗಿ ಸಾರ್ವಜನಿಕರ ಮತ್ತು ಪಟ್ಟಣದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೂಡಲೇ ಇಂತಹ ಮುಖ್ಯಾಧಿಕಾರಿ ಮತ್ತು ಜೆಇ ಯನ್ನು ಸೇವೆಯಿಂದ ವಜಾಗೊಳಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಹದಿನೈದು ದಿನಗಳ ಒಳಗಡೆ ಪಟ್ಟಣಕ್ಕೆ ಬೇರೆ ಅಧಿಕಾರಿಗಳನ್ನು ನೇಮಕ ಮಾಡಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಡಬೇಕು ಹಾಗೂ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಇತರೆ ಬೇಡಿಕೆಗಳನ್ನು ಈಡೇರಿಸಿಬೇಕೆಂದು ಜಿಲ್ಲಾಧಿಕಾರಿಯಾದ ಚಂದ್ರಶೇಖರ ನಾಯಕರವರಿಗೆ ಮನವಿ ಸಲ್ಲಿಸಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ವಾರದಲ್ಲಿ ಪಂಚಾಯತಿ ಮುಂಭಾಗದಲ್ಲಿ ಸಂಘಟನೆಗಳ ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸುತ್ತಿದ್ದೇವೆ..

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ ನಗನೂರು, ಮಲ್ಲಿಕಾರ್ಜುನ, ಎಲೀಜಾ ಗಂಡ ಒವ್ವನ್, ಅಮರೇಶ ಕುರಿ, ರಾಘವೇಂದ್ರ, ಲಿಂಗರಾಜ ಕಂದಗಲ್, ಹುಲಿಗೆಪ್ಪ ರಾಜಾರೇಶ್ವರಿ ಗಂಡ ತಿಪ್ಪಯ್ಯ ಸ್ವಾಮಿ, ವಿ ರಾಮಾದೇವಿ ಗಂಡ ಸುರೇಶ ರೆಡ್ಡಿ, ಕಿರಿಲಿಂಗ ಮ್ಯಾಗಳಮನಿ, ಮೌನೇಶ ಸೇರಿದಂತೆ ಇತರರು ಇದ್ದರು.

error: Content is protected !!