Sunday, 21st April 2024

ನಾನು ಸಿಎಂ ಆಗಬೇಕೆನ್ನುವುದು ಶಾಸಕರ ಅಭಿಪ್ರಾಯ: ಸಿದ್ದರಾಮಯ್ಯ

ಕೊಪ್ಪಳ: ಕೆಲ‌ವು ಶಾಸಕರು ನಾನು ಸಿಎಂ ಆಗಬೇಕು ಎಂದು ಬಯಸಿದ್ದಾರೆ, ಅದು ಅವರ ಶಾಸಕರ ಅಭಿಪ್ರಾಯ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆದರೆ ನಮ್ಮಲ್ಲಿ (ಕಾಂಗ್ರೆಸ್) ಒಂದು ಸಿಸ್ಟಮ್ ಇದೆ. ಮೊದಲು ಚುನಾವಣೆ ನಡೆದು, ಪಕ್ಷಕ್ಕೆ ಬಹುಮತ ಬರಬೇಕು. ನಂತರ ಶಾಸಕರ ಅಭಿಪ್ರಾಯ ಪಡೆದು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೋ ವೈಯಕ್ತಿಕ ಅಭಿಪ್ರಾಯ ಹೇಳಿದರೆ ಅದು ಪಕ್ಷದ ಅಭಿಪ್ರಾಯ ಅಲ್ಲ, ಈ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿಲ್ಲ ಎಂದರು.

ಅರವಿಂದ್ ಬೆಲ್ಲದ್ ಅವರ ಫೋನ್ ಟ್ರ್ಯಾಪಿಂಗ್ ವಿಚಾರ ಕುರಿತಂತೆ, ಈಗಾಗಲೇ ನಾನು ತನಿಖೆಗೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಪೊಲೀಸ್ ಗೆ ಆಗಲಿ, ಸರ್ಕಾರಕ್ಕೆ ಆಗಲಿ ಫೋನ್ ಕದ್ದಾಲಿಸಲು ಅಧಿಕಾರ ಇಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಏನಾಗಿದೆ ನಿಮಗೆ ಗೊತ್ತಲ್ಲ. ಯಾವ ಪಕ್ಷದವರಾದರೂ ಫೋನ್ ಕದ್ದಾಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!