Saturday, 27th July 2024

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ನಾನೇ: ಜೆಸಿಎಂ

ಚಿಕ್ಕನಾಯಕನಹಳ್ಳಿ : ಹಲವು ದಿನಗಳಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗುತ್ತಾರೆ ಎಂದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ನಾನೇ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ರಾಜ್ಯ ಹೆದ್ದಾರಿ ಯೋಜನೆಯಡಿ ೨೩ ಕೋಟಿ ವೆಚ್ಚದಲ್ಲಿ ಭರಣಾಪುರದಿಂದ ಲಕ್ಷ್ಮೀಪುರಕ್ಕೆ ನಿರ್ಮಾಣಗೊಳ್ಳಲಿರುವ ಸರ್ವಋತು ರಸ್ತೆ ಕಾಮಾಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಮಾಧುಸ್ವಾಮಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದೇ ರೀತಿ ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಬದಲಾಗುತ್ತಾರೆ ಎಂಬ ವದಂತಿಗಳು ಹರಡಿವೆ. ಇಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾನೇ ಕಾರ್ಯಕರ್ತರು ಮತ್ತು ಮತದಾರರು ಗೊಂದಲಕ್ಕೀಡಾಗುವುದು ಬೇಡ ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಒಬ್ಬರು ತಿರುಗುತ್ತಿದ್ದಾರೆ. ಅವರ ಮಾತಿನಲ್ಲಿ ಹುರುಳಿಲ್ಲ ನಾಳೆ ಬೊಮ್ಮಯಿಗೆ ಟಿಕೆಟ್ ಇಲ್ಲ ಎಂದು ಹಬ್ಬಿಸಿದರೂ ಆಶ್ಚರ್ಯ ಪಡಬೇಕಿಲ್ಲ. ದೇವೇಗೌಡ, ಯಡಿಯೂರಪ್ಪನವರೇ ನನ್ನ ವಿರುದ್ದ ಕೆಲಸ ಮಾಡಿದ್ದರೂ ನನ್ನನ್ನು ಸೋಲಿಸಲಾಗಲಿಲ್ಲ ಇನ್ನು ಇವರು ಯಾವ ಲೆಕ್ಕ ಎಂದು ಮಾಜಿ ಶಾಸಕ ಕಿರಣ್‌ಕುಮಾರ್ ಹೆಸರೇಳದೆ ಕುಟುಕಿದರು.

ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾನು ಜನರ ನಂಬಿಕೆ ಉಳಿಸಿಕೊಂಡಿದ್ದೇನೆ. ಅದಕ್ಕಾಗಿಯೇ ಬಿಜೆಪಿ ಹೈಕಮಾಂಡ್ ನನ್ನ ಅಕ್ಕ ಪಕ್ಕದ ಕ್ಷೇತ್ರಗಳನ್ನೂ ಗೆಲ್ಲಿಸಿಕೊಂಡು ಬರುವಂತೆ ತಿಳಿಸಿದೆ. ಹಣ, ಊಟ, ಇತರೆ ಯಾವುದನ್ನೂ ಹಂಚದೆ ಕ್ಷೇತ್ರದಲ್ಲಿ ಸೇವೆ ಮಾಡಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದೇನೆ. ಸಂವಿಧಾನ ಬದ್ದವಾಗಿ ಮುಂದಿನ ಚುನಾವಣೆ ಎದುರಿಸುತ್ತೇನೆ.

ಅಸೆಂಬ್ಲಿಯಲ್ಲಿ ಅರಸೀಕೆರೆ ಶಾಸಕರು ನನ್ನನ್ನು ಈ ವಿಚಾರಕ್ಕೆ ಹೊಗಳಿದ್ದರು. ಚಿಕ್ಕನಾಯಕನಹಳ್ಳಿ ನಮ್ಮಿಂದ ಅಭಿವೃದ್ದಿಯ ಬ್ರಾಂಡ್ ಆಗಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಅದನ್ನು ಮುಂದುವರಿಸಿಕೊAಡು ಹೊಗುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪರೋಕ್ಷವಾಗಿ ಮತಯಾಚನೆ ಮಾಡಿದರು.

ಮುಂದಿನ ಮುಖ್ಯಮಂತ್ರಿ ಮಾಧುಸ್ವಾಮಿ !
ಅಭಿವೃದ್ದಿ, ನಾಯಕತ್ವ, ವೈಚಾರಿಕತೆಗೆ ಮತ್ತೊಂದು ಹೆಸರು ಜೆಸಿಎಂ, ಸಚಿವರಾಗಿ ಮಾಧುಸ್ವಾಮಿ ಬಂದ ನಂತರ ಕ್ಷೇತ್ರದ ಸರ್ವ ಸ್ಪರ್ಶಿ ಅಭಿವೃದ್ದಿ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎಂದು ಹೇಳುವಂತಿಲ್ಲ. ಸರ್ವ ಸಮುದಾಯಗಳ ಅಭಿವೃದ್ದಿ ಮಾಡಿದ್ದಾರೆ. ಟಿವಿ ಮಾಧ್ಯಮಗಳಲ್ಲಿ ಚಿಕ್ಕನಾಯಕನಹಳ್ಳಿಯ ಸುದ್ದಿಯೇ ಬರುತ್ತಿರಲಿಲ್ಲ. ಈಗ ಸಚಿವರ ಬಗ್ಗೆ ರಾಜ್ಯವೇ ಮಾತನಾಡುತ್ತಿದೆ. ಸಮಸ್ಯೆಗಳ ಅರಿವು ಇರುವ ಇವರು ಮುಖ್ಯಮಂತ್ರಿಗಳಾದರೆ ರಾಜ್ಯವನ್ನು ಸಮರ್ಥವಾಗಿ ಮುನ್ನಡೆ ಸುತ್ತಾರೆಂದು ಬಗರ್‌ಹುಕುಂ ಕಮಿಟಿ ಸದಸ್ಯ ನಿರಂಜನ್‌ಮೂರ್ತಿ ಘೋಷಣೆ ಮೊಳಗಿಸಿದ್ದಾರೆ. ಇದಕ್ಕೆ ಸಚಿವರು ಏನನ್ನು ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು.

ಸಭೆಯಲ್ಲಿ ರಾಜ್ಯ ಹೆದ್ದಾರಿಯ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಲತಾ, ಎಇಇ ಹೊನ್ನೇಶಪ್ಪ, ತಾ.ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಮುಖಂಡರಾದ ಶಿವರಾಜ್, ಬಸವರಾಜ್, ಹರ್ಷ, ನಟರಾಜು, ಗೋವಿಂದರಾಜು, ಹಾಗು ಇತರರಿದ್ದರು.

error: Content is protected !!