Monday, 26th February 2024

ಗುರುಮಠಕಲ್ ಪುರಸಭೆ ಜೆಡಿಎಸ್ ತೆಕ್ಕೆಗೆ

ಯಾದಗಿರಿ : ಜಿಲ್ಲೆಯ ಗುರುಮಠಕಲ್ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾಗಿ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿದೆ.

ಚುನಾವಣಾಧಿಕಾರಿ ಸಂಗಮೇಶ ಜಿಡಗೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದಂತೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಖಾಜಾ ಮೈನೋದ್ಧೀನ್, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿಯಿಲ್ಲದ್ದ ರಿಂದ ಜೆಡಿಎಸ್ ಅಭ್ಯರ್ಥಿ ಭೀಮಮ್ಮ ದಂಡು ಉಮೇದುವಾರಿಕೆ ಸಲ್ಲಿಸಿದ್ದರು.

ಜೆಡಿಎಸ್ ಅಭ್ಯರ್ಥಿ ಪರ ಪಕ್ಷದ 8 ಸದಸ್ಯರು, ಬಿಜೆಪಿಯ ಇಬ್ಬರು, ಒಬ್ಬ ಪಕ್ಷೇತರ ಹಾಗೂ ಶಾಸಕರು ಕೈ ಎತ್ತುವ ಮೂಲಕ ಒಟ್ಟು 12 ಜನರು ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿಯ ಪರ ಪಕ್ಷದ 9 ಜನ ಸದಸ್ಯರು ಮತ ಚಲಾವಣೆ ಮಾಡಿದ್ದರು.

ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಬಹುಮತ ಹೊಂದಿದ್ದನ್ನು ಖಚಿತ ಪಡಿಸಿಕೊಂಡ ಚುನಾವಣಾಧಿಕಾರಿ, ಅಧ್ಯಕ್ಷರಾಗಿ ಪಾಪಣ್ಣ ಮನ್ನೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭೀಮಮ್ಮ ಮುಕುಡಿ ಅವರನ್ನು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿ ದರು.

Leave a Reply

Your email address will not be published. Required fields are marked *

error: Content is protected !!