Thursday, 28th November 2024

Kabaddi: ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿ ಟೂರ್ನಿಗೆ ತೆರಳಿದ ತಂಡ

ಶುಭಕೋರಿದ ಕಾಲೇಜು ಬೋಧಕ ಬೋಧಕೇತರ ಸಿಬ್ಬಂದಿ

ಚಿಕ್ಕಬಳ್ಳಾಪುರ : ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿ ಟೂರ್ನಿಗೆ ಆಯ್ಕೆಯಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾ ಲಯದ ಮಹಿಳಾ ತಂಡವು ತಮಿಳುನಾಡಿನಲ್ಲಿ ನವೆಂಬರ್ ೨೯ರಿಂದ ಡಿಸೆಂಬರ್ ೨ರವರೆಗೆ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಿ ಉತ್ತಮ ಪ್ರದರ್ಶನ ನೀಡಲು ಬುಧವಾರ ಚಿಕ್ಕಬಳ್ಳಾಪುರದಿಂದ ತೆರಳಿತು.

ನಗರ ಹೊರವಲಯ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಅವರಣದಿಂದ ಹೊರಟ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಹಿಳಾ ತಂಡಕ್ಕೆ ಶುಭವನ್ನು ಹಾರೈಸಿ ಮಾತನಾಡಿದ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಡಿ.ಚಂದ್ರಯ್ಯ ನಮ್ಮ ಕಾಲೇಜಿನ ಬಿಎ ವಿದ್ಯಾರ್ಥಿ ಗಳಾದ ಕೆ.ವಿ. ಸಹನ,ಕೆ.ವಿ.ಭವ್ಯ,ಅಂಜಲಿ, ಮುನ್ಸಿಪಲ್ ಕಾಲೇಜಿನ ವಿದ್ಯಾರ್ಥಿನಿ ಆರ್.ಬಿ.ಪವಿತ್ರ,ಬಿಜಿಎಸ್ ಕಾಲೇಜಿನ ಹೇಮಾವತಿ, ತಮಿಳು ನಾಡಿನಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕಬಡ್ಡಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳುತ್ತಿರುವುದು ಸಂತೋಷದ ಸಂಗತಿಯಾಗಿದೆ.ಇವರನ್ನು ತರಬೇತುಗೊಳಿಸಿದ ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್ ಅವರಿಗೆ, ಶ್ರಮವಹಿಸಿ ಆಟವಾಡುವ ಮೂಲಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿ ಒಳ್ಳೆಯ ಫಲಿತಾಂಶ ತರಲೆಂದು ಶುಭಕೋರುತ್ತಿದ್ದೇನೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ತಂಡಕ್ಕೆ ೨೮೫ ಕಾಲೇಜುಗಳ ಪೈಕಿ ನಮ್ಮ ಕಾಲೇಜಿನ ೩ ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಾಮಾನ್ಯ ಮಾತಲ್ಲ. ನಮ್ಮ ತಂಡ ತಮಿಳುನಾಡಿನಲ್ಲಿ ನಡೆಯುವ ದಕ್ಷಿಣ ಭಾರತ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೂಲಕ ಒಳ್ಳೆಯ ಫಲಿತಾಂಶ ತರುವ ನಿರೀಕ್ಷೆಯಿದೆ. ಇದಕ್ಕೆ ಸಹಕಾರ ನೀಡಿರುವ ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗೆ ಧಣ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಈ ವೇಳೆ ಮುನ್ಸಿಪಲ್ ಕಾಲೇಜಿನ ಪ್ರಾಂಶುಪಾಲ ಡಾ.ಮುನಿರಾಜು,ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಹರೀಶ್, ಡಾ.ಪದ್ಮಕುಮಾರಿ, ಗ್ರಂಥಪಾಲಕ ಸಂತೋಷ್, ವ್ಯವಸ್ಥಾಪಕ ಸುಬ್ರಹ್ಮಣಿ, ವಾಣಿಜ್ಯ ವಿಭಾಗದ ಶಿವಾನಂದ, ಐಕ್ಯುಎಸಿ ಸಂಚಾಲಕ ಅಶ್ವತ್ಥನಾರಾಯಣ ಮತ್ತಿತರರು ಇದ್ದರು.