Saturday, 23rd September 2023

ಡಿ.31ರಂದು ಕರ್ನಾಟಕ ಬಂದ್‌: ವಾಟಾಳ್‌ ನಾಗರಾಜ್‌

karnataka bandh

ಬೆಂಗಳೂರು: ಡಿ.31ರಂದು ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ಕನ್ನಡ ಚಳವಳಿ ಪಕ್ಷದ ನಾಯಕ

ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಇರಲಿದೆ ಎಂದು ಹೇಳಿದರು. ಈ ಮೂಲಕ ಎಂಇಎಸ್‌ ಬ್ಯಾನ್‌ ಮಾಡುವಂತೆ ರಾಜ್ಯ ಸರ್ಕಾರವನ್ನು ಮನವಿ ಮಾಡಿಕೊಂಡಿದೆ.

ಎಲ್ಲರೂ ಕೂಡ ಬಂದ್‌ಗೆ ಬೆಂಬಲ ನೀಡುವಂತೆ ಹೇಳಿದರು. ಕನ್ನಡ ನಾಡಿನಲ್ಲಿ ಬೇರೆಯವರ ಆಟ ನಡೆಯು ವುದಿಲ್ಲ. ಕನ್ನಡ ಪರ ಸಂಘಟನೆಗಳು ನೀಡಿರುವ ಬಂದ್‌ಗೆ ಸರಿ ಸುಮಾರು 35ಕ್ಕೂ ಅಧಿಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಾಗುವುದು.

ಎಂಇಎಸ್‌ ಬ್ಯಾನ್‌ ಮಾಡುವಲ್ಲಿ ಸಿಎಂ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಅಂದು ಅಗತ್ಯವಾದ ಕೆಲಸಗಳನ್ನು ಹೊರತುಪಡಿಸಿ ಬೇರೆ ಸೇವೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ವಾಟಾಳ್‌ ನಾಗರಾಜ್‌ ಮನವಿ ಮಾಡಿದರು.

ಬಂದ್‌ಗೆ ಎಲ್ಲರೂ ಸಿದ್ದರಾಗಿದ್ದು, ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುವಂತೆ ಮನವಿ ಮಾಡಿದರು. ರಾಜ್ಯ ಸರ್ಕಾರ ಡಿ.29ರೊಳಗೆ ಎಂಇಎಸ್‌ ಸಂಘಟನೆ ಬ್ಯಾನ್‌ ಮಾಡದೇ ಇದ್ದಲ್ಲಿ ಡಿ.31ರಂದು ಕರ್ನಾಟಕ ಬಂದ್‌ ಮಾಡಲಾಗುವುದು ಎಂದು ಹೇಳಿದರು.

error: Content is protected !!