Saturday, 27th July 2024

ರಾಜ್ಯಪಾಲರಿಂದ ಮೈಸೂರು ಅರಮನೆ, ಕೆಆರ್ ಎಸ್ ವೀಕ್ಷಣೆ

ಮೈಸೂರು: ಮೈಸೂರಿಗೆ ಪ್ರವಾಸ ಕೈಗೊಂಡಿರುವ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೈಸೂರು ಅರಮನೆಗೆ ಭೇಟಿ ನೀಡಿ, ಅರಮನೆ ವೈಭವ ವೀಕ್ಷಣೆ ಮಾಡಿದರು.

ರಾಜವಂಶಸ್ಥರಾದ ಪ್ರಮೋದಾ ದೇವಿ ಅವರು ಗೌರವಾನ್ವಿತ ರಾಜ್ಯಪಾಲ ರನ್ನು ಸ್ವಾಗತಿಸಿ, ಕರ್ನಾಟಕದ ರಾಜ ಸಂಸ್ಕೃತಿ ಮತ್ತು ಮೈಸೂರು ಸಂಸ್ಥಾನದ ಇತಿಹಾಸವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಕಮಲ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸಂಗೀತ ಕಾರಂಜಿ ವೀಕ್ಷಣೆ: ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ಬೃಂದಾವನ್ ಉದ್ಯಾನ ವೀಕ್ಷಿಸಿದ ಗೌರವಾನ್ವಿತ ರಾಜ್ಯಪಾಲರು ಸಂಗೀತ ನೃತ್ಯ ಕಾರಂಜಿಯ ಸೊಬಗನ್ನು ಸವಿದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಅಶ್ವತಿ, ಎಸ್ಪಿ ಯತೀಶ್ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಶುಖವನ ಗಿಳಿಗಳೊಂದಿಗೆ ಸಮಯ ಕಳೆದ ರಾಜ್ಯಪಾಲರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಿರ್ಮಿಸಿರುವ ಶುಕವನ’ ಮತ್ತು ಬ್ನೊಸಾಯಿ ಉದ್ಯಾನವನ್ನು ವೀಕ್ಷಣೆ ಮಾಡಿದರು. ನಂತರ ಭುವಿ ವನವನ್ನು ಅನಾವರಣಗೊಳಿಸಿದರು. ಬಳಿಕ ವಿವಿಧ ಜಾತಿಯ ಗಿಳಿಗಳ ಕಲರವ ಆಲಿಸಿದರು. ತದನಂತರ ಪಕ್ಷಿಗಳಿಗೆ ಬೀಜಗಳು, ಕಾಳುಗಳನ್ನು ನೀಡಿದರು.

ಈ ಸಂದರ್ಭದಲ್ಲಿ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ, ಡಾ.ನಿತ್ಯಾನಂದ ರಾವ್, ಬಿಜೆಪಿ ಮುಖಂಡ ಕೇಬಲ್ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!