Friday, 24th May 2024

ಕೊಟ್ಟೂರು ಹಬ್ಬದ ಪ್ರಯುಕ್ತ ಮೂರು ದಿನ ವಿಶೇಷ ರೈಲು ಸಂಚಾರ

ದಾವಣಗೆರೆ: ಕೊಟ್ಟೂರು ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಮಾರ್ಚ್ 6ರಿಂದ 8ರ ತನಕ ಓಡಿಸಲಿದೆ.

ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸದೇ ಜನರು ಸಂಚಾರ ನಡೆಸಬಹುದಾಗಿದೆ. ಮೂರು ದಿನಗಳು ಮಾತ್ರ ರೈಲು ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊಟ್ಟೂರು ಪಟ್ಟಣದಲ್ಲಿ ನಡೆಯುವ ಗುರು ಕೊಟ್ಟೂರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 7ರಂದು ರಥೋತ್ಸವ ನಡೆಯಲಿದೆ.

ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊಟ್ಟೂರು ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಮಾ.6 ರಿಂದ ಮಾ.8 ರವರೆಗೆ ಮೂರು ದಿನಗಳ ಮಟ್ಟಿಗೆ ರೈಲು ಹೊಸಪೇಟೆ-ದಾವಣಗೆರೆ-ಹೊಸಪೇಟೆ ಆರಕ್ಷಣಾರಹಿತ ವಿಶೇಷ ರೈಲನ್ನು ಓಡಿಸಲಿದೆ.

Leave a Reply

Your email address will not be published. Required fields are marked *

error: Content is protected !!