Wednesday, 11th December 2024

ಟಿಕೆಟ್ ವಿಚಾರವಾಗಿ ದೂರು: ಹಲ್ಲೆ, ಕೊಲೆ ಬೆದರಿಕೆ ಆರೋಪ

ಬೆಂಗಳೂರು: ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೇಲೆ ಹಲ್ಲೆ, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.
ಈ ಕಾರಣದಿಂದ ನಿಗಮದ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವ್ಯಾಪಾರಿ ರಾಘವೇಂದ್ರ ಅವರು ತಮ್ಮ ಊರಿಗೆ ತೆರಳಲು ಮೆಜೆಸ್ಟಿಕ್ ನಲ್ಲಿನ ಕೆಎಸ್‌ಆರ್‌ಟಿ ಬಸ್ ಟರ್ಮಿನಲ್ ಗೆ ಬಂದಿದ್ದಾರೆ. ಅಲ್ಲಿಂದ ಅವರು ಹರಿಹರಕ್ಕೆ ಹೋಗುವ ಬಸ್ ಹತ್ತಿ ಹಿರಿಯೂರಿಗೆ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.
ಟಿಕೆಟ್ ವಿಚಾರವಾಗಿ ದೂರು ನೀಡಿದ ಈ ಪ್ರಯಾಣಿಕ ರಾಘವೇಂದ್ರ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ. ಹಿರಿಯೂರಿಗೆ ಟಿಕೆಟ್ ಕೇಳಿದಾಗಿ ನಿರ್ವಾಹಕರು ಈ ಬಸ್ ಹಿರಿಯೂರಿಗೆ ಹೋಗುವುದಿಲ್ಲ ಬದಲಿಗೆ ಬೈಪಾಸ್ ಮೂಲಕ ತೆರಳುತ್ತದೆ ಎಂದು ತಿಳಿಸಿದ್ದಾರೆ. ಹಾಗಾದರೆ ತಾನು ಬೈಪಾಸ್‌ನಲ್ಲಿ ಇಳಿದುಕೊಳ್ಳುವುದಾಗಿ ರಾಘವೇಂದ್ರ ಹೇಳಿ ಟಿಕೆಟ್ ಕೇಳಿದ್ದಾರೆ. ಆಗ ಕಂಡಕ್ಟರ್ ಚಿತ್ರದುರ್ಗಕ್ಕೆ ಟಿಕೆಟ್ ಪಡೆಯಬೇಕು ಮತ್ತು ನಂತರ ಮಾತ್ರ ಹಿರಿಯೂರಿನಲ್ಲಿ ಇಳಿಯಬಹುದು ಎಂದು ಹೇಳಿದ್ದಾರೆ.
ಹಿರಿಯೂರಿನಲ್ಲಿ ಇಳಿಯಬೇಕಾದರೆ ನಾನು ಯಾಕೆ ಚಿತ್ರದುರ್ಗಕ್ಕೆ ಯಾಕೆ ಟಿಕೆಟ್ ಪಡೆಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಒಪ್ಪದ ಆ ಬಸ್ ನಿರ್ವಾಹಕರು ರಾಘವೇಂದ್ರ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿದ್ದಾರೆ. ಹಿರಿಯೂರು ಚಿತ್ರದುರ್ಗದಿಂದ ದಕ್ಷಿಣಕ್ಕೆ ಸುಮಾರು 43 ಕಿ.ಮೀ. ದೂರದಲ್ಲಿದೆ.
ಹಿರಿಯೂರಿಗೆ ಇಳಿಯಬೇಕಾದವರು ಯಾಕೆ ಮುಂದಿನ ಊರಿಗೆ ಟಿಕೆಟ್ ಪಡೆಯುತ್ತಾರೆ. ಇದು ಸಾಮಾನ್ಯ ಸಂಗತಿಯಾಗಿದೆ. ನಿಗಮದ ಮ್ಯಾನೇಜರ್‌ಗೆ ದೂರು ಬಸ್ ನಿಂದ ಕೆಳಗೆ ಇಳಿದ ರಾಘವೇಂದ್ರ ಅವರು ಡಿಪೋ ವ್ಯವಸ್ಥಾಪಕರಿಗೆ ದೂರು ನೀಡಿದ್ದಾರೆ. ಡಿಪೋ ಮ್ಯಾನೇಜರ್ ಅದೇ ನಿಯಮವನ್ನೇ ತಿರುಗಿ ಹೇಳಿದ್ದಾರೆ. ಹಿರಿಯೂರಿಗೆ ಟಿಕೆಟ್ ಇಲ್ಲ. ನೀವು ಚಿತ್ರದುರ್ಗಕ್ಕೆ ಟಿಕೆಟ್ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.