Sunday, 8th September 2024

ರಾಜ್ಯದ 12 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ಕರ್ನಾಟಕಾದ್ಯಂತ ದಾಳಿ ಮಾಡಿದ್ದಾರೆ. 12 ಜನ ಅಧಿಕಾರಿಗಳಿಗೆ ಸೇರಿದ 55 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ತಪಾಸಣೆ ನಡೆಸಿದ್ದಾರೆ.

ಬೆಂಗಳೂರು ನಗರದ ಆರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಇಬ್ಬರು, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ದಾಳಿ

  1. ತುಮಕೂರು- ಕೆಐಎಡಿಬಿ ಇಲಾಖೆ ಆಪರೇಟಿಂಗ್ ಆಫೀಸರ್
  2. ಯಾದಗಿರಿ- ಬಲವಂತ್ ಜಿಲ್ಲಾ ಪಂಚಾಯತ್​ ಯಾದಗಿರಿ ಪ್ರಾಜೆಕಟ್​
  3. ಬೆಂಗಳೂರು ಗ್ರಾ- ಆರ್ ಸಿದ್ದಪ್ಪ ಸೀನಿಯರ್​ ಪಶುವೈದ್ಯ- ದೊಡ್ಡಬೈಲವಂಗಲ ದೊಡ್ಡಬಳ್ಳಾಪುರ
  4. ಬೆಂಗಳೂರು ಗ್ರಾ- ಕೆ ನರಸಿಂಹ ಮೂರ್ತಿ ಪೌರಾಡಳಿತ ಆಯುಕ್ತ ಹೆಬ್ಬಗೋಡಿ
  5. ಬೆಂಗಳೂರು ನಗರ- ಬಿ ವಿ ರಾಜ FDA KDB LAND acquisition
  6. ಬೆಂಗಳೂರು ನಗರ- ರಮೇಶ್ ಕುಮಾರ್ ಜಾಯಿಂಟ್​ ಕಮಿಷನರ್ ಕಮಷಿಯಲ್ ಟ್ಯಾಕ್ಸ್​
  7. ಬೆಂಗಳೂರು ನಗರ- ಅಥ್ತಾರ್ ಅಲಿ- ಡೆಪ್ಯೂಟಿ ಕಂಟ್ರೋಲರ್​ ಲೀಗಲ್​ ಭೂ ವಿಜ್ಞಾನ
  8. ಶಿವಮೊಗ್ಗ- ನಾಗೇಶ್​ ಬಿ- ಅಧ್ಯಕ್ಷ ಅಂತರಗಂಗೆ ಗ್ರಾ.ಪಂ. ಭದ್ರವತಿ
  9. ಶಿವಮೊಗ್ಗ- ಪ್ರಕಾಶ್​​ ಡೆಪ್ಯೂಟಿ ಡೈರೆಕ್ಟರ್​ ಆರ್ಟಿಕಲ್ಚರ್​ ಶಿವಮೊಗ್ಗ
  10. ಬೆಂಗಳೂರು ನಗರ-ಚೇತನ್ ಕುಮಾರ್ ಕಾರ್ಮಿಕ ಇಲಾಖಾಧಿಕಾರಿ ಮಂಡ್ಯ ವಿಭಾಗ
  11. ಬೆಂಗಳೂರು ನಗರ – ಆನಂದ್ ಸಿಎಲ್​- ಆಯುಕ್ತ ಮಂಗಳೂರು ಮಹಾನಗರ ಪಾಲೀಕೆ
  12. ಬೆಂಗಳೂರ ನಗರ- ಮಂಜುನಾಥ್​ TR- ಫಸ್ಟ್​ ಡಿವಿಜನ್​ ಅಸಿಸ್ಟೆಂಟ್​ (FDA) ಬೆಂಗಳೂರು ಉತ್ತರ ವಿಭಾಗ, ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಿಸಿದ 55 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಿ.ಟಿ ಮುದ್ದುಕುಮಾರ್ ಬೆಂಗಳೂರಿನ ನಾಗರಭಾವಿಯ ಎರಡನೇ ಹಂತದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿ ಕಚೇರಿ ಇದೆ.

ತುಮಕೂರು ನಗರದ ಬನಶಂಕರಿ ನಗರದಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಮನೆ ಇದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ಸಿ.ಟಿ ಮುದ್ದುಕುಮಾರ್ ಅವರಿಗೆ ಸೇರಿದ ಫಾರಂಹೌಸ್ ಇದೆ. ಅಲ್ಲದೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕವಿದೆ. ಈ ಎಲ್ಲ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!