Saturday, 27th July 2024

ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ಧ ಮಾರ್ಕ್ ರೊಡ್ರಿಗಸ್ ನಿಧನ

ಮಂಗಳೂರು: ಬ್ರಿಟಿಷ್ ಭಾರತೀಯ ಸೇನೆಗೆ ಸೇರ್ಪಡೆಗೊಂಡು, ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಮಾರ್ಕ್ ರೊಡ್ರಿಗಸ್ (98) ಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮಾರ್ಕ್ ರೊಡ್ರಿಗಸ್ 1922ರ ಎಪ್ರಿಲ್ 25ರಂದು ಕುಂದಾಪುರದಲ್ಲಿ ಜನಿಸಿದರು. ಬೆಳೆದಿದ್ದು ಮಂಗಳೂರಿನಲ್ಲಿ. 1940ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಸೇರ್ಪಡೆಯಾದರು. ಎರಡನೇ ಮಹಾಯುದ್ಧ (1939-1945) ಪ್ರಗತಿಯಲ್ಲಿದ್ದ ಸಂದರ್ಭ ಇವರನ್ನು ಮಿತ್ರರಾಷ್ಟ್ರಗಳ ವಿರುದ್ಧ ಹೋರಾಡಲು ಮಧ್ಯಪ್ರಾಚ್ಯ ಯುದ್ಧ ವಲಯಕ್ಕೆ ಕಳುಹಿಸಲಾಗಿತ್ತು.

ನಂತರ 1942ರಲ್ಲಿ ಮಾರ್ಕ್ ಅವರನ್ನು ಜರ್ಮನ್ ಪಡೆಗಳು ವಶಪಡಿಸಿಕೊಂಡಿದ್ದವು. ಏಳು ವರ್ಷಗಳ ಸಕ್ರಿಯ ಮಿಲಿಟರಿ ಸೇವೆಯ ನಂತರ ಮಾರ್ಕ್ ಅವರು ಭಾರತಕ್ಕೆ ಮರಳಿದರು.

ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿ, ರಕ್ಷಣಾ ಸ್ಥಾಪನೆಗೆ ಸೇರಿದರು. ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 1981ರಲ್ಲಿ ಡಿಆರ್‌ಡಿಒ ವಿಜ್ಞಾನಿಗಳಾಗಿ ನಿವೃತ್ತರಾದರು.

ಮೃತರು ಐವರು ಪುತ್ರಿಯರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ. ಮಾರ್ಕ್ ಅವರ ಅಂತ್ಯಕ್ರಿಯೆಯು ನ.8ರಂದು ಮಧ್ಯಾಹ್ನ 3:30ಕ್ಕೆ ನಗರದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ನೆರವೇರಲಿದೆ.

Leave a Reply

Your email address will not be published. Required fields are marked *

error: Content is protected !!