Saturday, 27th July 2024

ಅನಿವಾಸಿ ಭಾರತೀಯರಿಗಾಗಿ ಸಚಿವಾಲಯ: ಡಾ.ಜಿ.ಪರಮೇಶ್ವರ್

ಬೆಂಗಳೂರು: ಕೇರಳದ ಮಾದರಿಯಲ್ಲಿ ಅನಿವಾಸಿ ಭಾರತೀಯರ ಸಚಿವಾಲಯ ತೆರೆಯುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ಭರವಸೆ ನೀಡಿದರು.

ವಿಧಾನಸಭೆಯ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ನೇತೃತ್ವದಲ್ಲಿ 15ಕ್ಕೂ ಹೆಚ್ಚು ವಿವಿಧ ರಾಷ್ಟ್ರಗಳ ಅನಿವಾಸಿ ಭಾರತೀಯರು ಸದನದ ಕಾರ್ಯಕಲಾಪಗಳನ್ನು ವೀಕ್ಷಿಸುತ್ತಿರುವ ವಿಚಾರವನ್ನು ಸ್ವಾಗತಿಸಿ ಮಾತನಾಡಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆ ಸಿದ್ದಪಡಿಸುವಾಗ ಪ್ರತ್ಯೇಕ ಸಚಿವಾಲಯ ಮಾಡುವ ಬೇಡಿಕೆಯನ್ನು ಅನಿವಾಸಿ ಭಾರತೀಯರು ಇಟ್ಟಿದ್ದರು. ಅದರಂತೆ ಪ್ರಣಾಳಿಕೆಯಲ್ಲೂ ಆ ವಿಚಾರವನ್ನು ಸೇರಿಸಿದ್ದೆವು. ಅವರದೇ ಆದ ಸಮಸ್ಯೆಗಳಿರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಸಚಿವಾಲಯ ಮಾಡುತ್ತೇವೆ ಎಂದರು. ಕಾನೂನಾತ್ಮಕವಾಗಿ ಅವರಿಗೆ ಅಗತ್ಯವಿರುವ ಸಹಾಯ ಮಾಡುತ್ತೇವೆ. ಕಲ್ಯಾಣ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಕೆನಡಾ, ಯುಕೆ, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಅನಿವಾಸಿ ಭಾರತೀಯರು ಸದನದ ಕಲಾಪ ವೀಕ್ಷಿಸುತ್ತಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ ಎಂದರು. ಉದ್ಯೋಗಹರಿಸಿಕೊಂಡು ಬೇರೆ ಬೇರೆ ದೇಶಗಳಲ್ಲಿ ಉದ್ಯೋಗವನ್ನು ಕಟ್ಟಿಕೊಂಡಿದ್ದಾರೆ. ಅನೇಕರು ಉದ್ಯಮಿಗಳಾಗಿ ಯಶಸ್ವಿ ಯಾಗಿದ್ದಾರೆ. ಶೇ.60ರಿಂದ 80ರಷ್ಟು ಅನಿವಾಸಿ ಭಾರತೀಯರು ಹೊರ ರಾಷ್ಟ್ರದಲ್ಲಿ ಗಳಿಸಿದ ಆದಾಯವನ್ನು ಭಾರತಕ್ಕೆ ಮರಳಿ ತರುವ ಮನಸ್ಸು ಮಾಡಿ ದ್ದಾರೆ. ಹೊರ ದೇಶಕ್ಕೆ ಹೋದರೆ ಮರಳಿ ಬರುವುದಿಲ್ಲ ಎಂಬ ಪರಿಸ್ಥಿತಿ ಈಗಿಲ್ಲ. ಸಾಕಷ್ಟು ಬದಲಾಗಿದೆ. ಇಲ್ಲಿ ಸಿಎಸ್‍ಆರ್ ನಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಿದ್ದಾರೆ.

ರಾಜ್ಯ ಸರ್ಕಾರ ಅನಿವಾಸಿ ಭಾರತೀಯರ ಸಮಿತಿಯನ್ನು ರಚಿಸಿದ್ದು, ಉಪಾಧ್ಯಕ್ಷರಾಗಿ ಆರತಿ ಕೃಷ್ಣ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು ಸಭಾಧ್ಯಕ್ಷರ ಗ್ಯಾಲರಿಯಲ್ಲಿ 15 ವಿವಿಧ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರು ವೀಕ್ಷಣೆ ಮಾಡುತ್ತಿದ್ದಾರೆ. ಅವರನ್ನು ಎಲ್ಲ ಶಾಸಕರು ಸರ್ಕಾರದ ಪರವಾಗಿ ಸ್ವಾಗತಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!