Friday, 12th April 2024

ತಾಯಿ-ಮಗ ಅಪಘಾತದಲ್ಲಿ ಸಾವು

ಹಾಸನ: ಹಾಸನದ ಬಿ.ಟಿ.ಕೊಪ್ಪಲು ಬಳಿ ಶುಕ್ರವಾರ ಬೆಳಗ್ಗೆ ಶಾಲೆಗೆ ಹೊರಟ್ಟಿದ್ದ ತಾಯಿ-ಮಗ ಅಪಘಾತದಲ್ಲಿ ಮೃತಪಟ್ಟಿ ದ್ದಾರೆ.

ಸೀಮಾ ಮತ್ತು ಇವರ ಪುತ್ರ ಮಯೂರ(10) ಮೃತ ದುರ್ದೈವಿಗಳು. ಮಗನನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಸೀಮಾ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಯಮನಂತೆ ಬಂದ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ತಾಯಿ-ಮಗ ದುರಂತ ಅಂತ್ಯ ಕಂಡಿದ್ದಾರೆ.

ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!