Thursday, 30th November 2023

ಎಂ.ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯ ನಿವೃತ್ತಿ

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಬೆಂಬಲಿಗರನ್ನು ನೋಡಿ ಕಣ್ಣೀರಿಟ್ಟ ರೇಣುಕಾಚಾರ್ಯ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಜನ ಸೋಲಿಸಿದ್ದಾರೆ ಎಂದು ಬೆಂಬಲಿಗರ ಬಳಿ ರೇಣು ಕಾಚಾರ್ಯ ನೋವು ತೋಡಿಕೊಂಡಿದ್ದಾರೆ. ಇದಕ್ಕೆ ಒಪ್ಪದ ಬೆಂಬಲಿಗರು ಅಂಥ ಮಾತು ಹೇಳಬೇಡಿ ಎಂದಿದ್ದಾರೆ.

error: Content is protected !!