Sunday, 8th September 2024

ಮುಂಗಾರು ಸಾಂಸ್ಕೃತಿಕ ಹಬ್ಬದ ಹೆಸರಿನಲ್ಲಿ ಮೂಕ ಪ್ರಾಣಿಗಳ ಶೋಷಣೆ

ರಾಯಚೂರು : ನಗರದಲ್ಲು ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಣೆಯ ಹೆಸರಿನಲ್ಲಿ ಮೂಕ ಪ್ರಾಣಿ ಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸ್ಪರ್ಧೆ ಹೆಸೆರಿನಲ್ಲಿ ಮನಬಂದಂತೆ ಥಳಿಸಿ ಮನ ರಂಜನೆ ಪಡೆಯು ತ್ತಿದ್ದಾರೆ. ಇದೆಲ್ಲಾ ಆಗುತ್ತಿರುವುದು ಅಧಿಕಾರಿ, ಪೊಲೀಸ್, ಜನಪ್ರತಿನಿಧಿಗಳ ಸಮ್ಮುಖದಲ್ಲೆ.

ನಗರದ ಎಪಿಎಂಸಿಯಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭ ವಾಗಿದ್ದು ಈ ಒಂದು ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ ಎತ್ತು ಗಳಿಂದ ಭಾರವಾದ ಕಲ್ಲುಗಳನ್ನು ಎಳೆಯುವ ಸ್ಪರ್ಧೆಯು ಒಂದಾಗಿದೆ. ಆದರೆ ಇಲ್ಲಿ ನಿಜಕ್ಕೂ ಈ ಒಂದು ಸ್ಪರ್ಧೆ ನೋಡಿದರೆ ಮೂಕಪ್ರಾಣಿಗಳ ವೇದನೆ ಹೇಳಿಕೊಳ್ಳಲು ಸಾಧ್ಯವಾಗದಷ್ಟು ಹಿಂಸಿಸಲಾಗುತ್ತದೆ. ಕಲ್ಲು ಎಳೆಸುವ ಸ್ಪರ್ಧೆಯಲ್ಲಿ ಎರಡು ಎತ್ತುಗಳಿಗೆ ಸುಮಾರು ಎಂಟು ಜನ ಮನಬಂದಂತೆ ಥಳಿಸುತ್ತಾರೆ.

ಎತ್ತುಗಳಿಗೆ ಬಾರುಕೋಲಿನಿಂದ ಹೊಡೆಯುವ ಆ ಹೊಡೆತ ಅವುಗಳ ಮೈಮೇಲೆ ಗಾಯವನ್ನು ಮಾಡಿದರು, ಯಾರಿಗೂ ಪ್ರಾಣಿ ಗಳ ಮೇಲೆ ಕನಿಕರ ಇಲ್ಲ ಎಂಬುದು ಗೊತ್ತಾಗುತ್ತದೆ. ಈ ಒಂದು ಹಬ್ಬದಲ್ಲಿ ಬುದ್ಧಿವಂತರು, ಹಣವಂತರು, ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಜ್ಞಾವಂತರು ಎಲ್ಲರೂ, ಈ ಎತ್ತುಗಳಿಗೆ ಥಳಿಸುವುದನ್ನು ನೋಡಿ ದರೂ ಕಣ್ಣು ಮುಚ್ಚಿ ಕುಳಿತಿರುತ್ತಾರೆ.

ರೈತರ ಹೆಸರಿನಲ್ಲಿ ಆಚರಿಸುವ ಈ ಒಂದು ಮುಂಗಾರು ಹಬ್ಬ, ನಿಜವಾದ ರೈತನಿಗೆ ಯಾವುದೇ ರೀತಿಯಾದ ಒಂದು ಮನ್ನಣೆ ಸಿಗುತ್ತಿಲ್ಲ. ಈ ಒಂದು ಸ್ಪರ್ಧೆಯಲ್ಲಿ ಲಕ್ಷಾಂತರ ರೂಪಾಯಿ ಬಹುಮಾನ ನೀಡಲಾಗುತ್ತದೆ. ಪ್ರಾಣಿಗಳಿಗೆ ಹಿಂಸೆ ನೀಡಿ ಮನ ರಂಜನೆ ಪಡೆದು ಅದಕ್ಕೆ ಬಹುಮಾನ ನೀಡುವುದು ಬೇಕಾ ಎಂಬ ಪ್ರಶ್ನೆಗಳು ಕೂಡ ಸಾಕಷ್ಟು ಮೂಡುತ್ತವೆ.

ಈ ಹಿಂದೆ ಕಂಬಳ ಜನಪದ ಕ್ರಿಡೆಯಾದರೂ ಪ್ರಾಣಿಗಳನ್ನು ಹಿಂಸಿಸಲಾಗುತ್ತದೆ ಎಂಬ ನಿಟ್ಟಿನಲ್ಲಿ ಸರ್ಕಾರ ನಿಷೇಧಕ್ಕೆ ಮುಂದಾ ಗಿತ್ತು, ಅದೇ ರೀತಿಯಲ್ಲಿ ಈ ಭಾಗದಲ್ಲೂ ಕಲ್ಲು ಎಳೆಯುವ ಸ್ಪರ್ಧೆಯಿಂದ ಮೂಕಪ್ರಾಣಿಗಳು ವೇಧನೆ ಅನುಭವಿಸುತ್ತಿವೆ. ಎಲ್ಲಿದೆ ಪ್ರಾಣಿದಯಾ ಸಂಘ, ಎಲ್ಲಿದ್ದಾರೆ ಪ್ರಾಣಿ ಪ್ರಿಯರು ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಇನ್ನಾದ್ರು ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಾಗಿದೆ.

error: Content is protected !!