Saturday, 27th July 2024

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: 32 ಕಡೆಗಳಲ್ಲಿ ಎನ್‌ಐಎ ದಾಳಿ

ಮಂಗಳೂರು: ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಖೆಯನ್ನು ಎನ್‌ಐಎ ಚುರುಕು ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 32 ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಪುತ್ತೂರು ಮತ್ತು ಸುಳ್ಯ ತಾಲೂಕಿನ ಸುಮಾರು 32 ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿದ್ದು, ಕೆಲವು ಮನೆ ಮತ್ತು ಖಾಸಗಿ ಕಟ್ಟಡಗಳ ಮೇಲೆ ದಾಳಿ ಮಾಡಿದೆ. ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ಮನೆ ಮೇಲೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎನ್‌ಐಎ ಅಧಿಕಾರಿಗಳಿಗೆ ರಾಜ್ಯದ ಪೊಲೀಸರು ಸಾಥ್ ನೀಡಿದ್ದು, ಪ್ರಕರಣದ ಮತ್ತಷ್ಟು ಆಯಾಮಗಳ ಬಗ್ಗೆ ಎನ್‌ಐಎ ತನಿಖೆ ಮಾಡುತ್ತಿದೆ.

ಜುಲೈ 26ರಂದು ಪ್ರವೀಣ್ ನೆಟ್ಟಾರ್ ಹತ್ಯೆಯಾಗಿದ್ದು, ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಪೊಲೀಸ ರು ಬಂಧನ ಮಾಡಿದ್ದರು. ಬಳಿಕ ಕೇಂದ್ರದ ಎನ್‌ಐಎಗೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ವನ್ನು ವರ್ಗಾಯಿಸಲಾಯಿತು.

ರಾಜ್ಯ ಪೊಲೀಸರು ಪ್ರವೀಣ್ ಹತ್ಯೆ ಆರೋಪಿಗಳಾದ ಸವಣೂರು ನಿವಾಸಿ ಜಾಕಿರ್ (29), ಬೆಳ್ಳಾರೆ ನಿವಾಸಿ ಶಫೀಕ್ (27), ಬೆಳ್ಳಾರೆ ಪಳ್ಳಿ ಮಜಲು ನಿವಾಸಿ ಸದ್ದಾಂ (32), ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್ (42), ಸುಳ್ಯದ ನಾವೂರು ನಿವಾಸಿ ಹಬೀದ್ (22), ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28), ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33), ಸುಳ್ಯ ನಿವಾಸಿ ಶಿಹಾಬುದ್ದೀನ್ (33), ಪುತ್ತೂರಿನ‌ ಅಂಕತ್ತಡ್ಕ ನಿವಾಸಿ ರಿಯಾಝ್ (27), ಸುಳ್ಯದ ಎಲಿಮಲೆ‌ ನಿವಾಸಿ ಬಶೀರ್ (28) ಎಂಬ ಆರೋಪಿಗಳನ್ನು ಬಂಧನ ಮಾಡಲಾಗಿದೆ.

error: Content is protected !!