Tuesday, 28th May 2024

ಮಹಾನಗರಪಾಲಿಕೆ ಚುನಾವಣೆ: ತುಂತುರು ಮಳೆ ನಡುವೆ ಮತದಾನ ಆರಂಭ

ಬೆಳಗಾವಿ: ಮಹಾನಗರಪಾಲಿಕೆ ಸದಸ್ಯರ ಆಯ್ಕೆಗೆ ಮತದಾನ ಆರಂಭವಾಗಿದೆ. 58 ವಾರ್ಡ್‌ಗಳಲ್ಲಿ 385 ಅಭ್ಯರ್ಥಿಗಳು‌ ಕಣದಲ್ಲಿದ್ದಾರೆ. ಒಟ್ಟು 415 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ತುಂತುರು ಮಳೆ ಆಗುತ್ತಿರುವುದು ಮತದಾನಕ್ಕೆ ಅಡ್ಡಿಯಾಗಿದೆ. ಮಳೆ ನಿಂತು ಬಿಸಿಲು ಬಂದ ಬಳಿಕ ಮತದಾನ ಬಿರುಸು ಪಡೆದುಕೊಂಡಿದೆ. ಬಿಜೆಪಿಯ 55 ಹಾಗೂ ಕಾಂಗ್ರೆಸ್‌ನ 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಗಾವಿಯ ಶಾಹೂನಗರ ಸರ್ಕಾರಿ ಶಾಲೆಯ ಮತಗಟ್ಟೆಗೆ ನೂರು ಮೀಟರ್ ಹೊರಗೆ ಅಭ್ಯರ್ಥಿಗಳ ಕಡೆ ಯವರು ಹಾಕಿದ್ದ ಟೇಬಲ್‌ಗಳ ಬಳಿ ಜನರು ಸೇರಿದ್ದರು.

ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಮತದಾರರ ಮನ ವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಶಾಹೂ ನಗರ ಸರ್ಕಾರಿ ಶಾಲೆ ಆವರಣದ ಬಳಿಯೇ ಮತ ಯಾಚಿಸುತ್ತಿದ್ದ ಬಿಜೆಪಿ ಅಭ್ಯರ್ಥಿ ಶ್ರೇಯಸ್ ನಾಕಾಡಿ ಹಾಗೂ ಪಕ್ಷೇತರ ಅಭ್ಯರ್ಥಿ ವಂದನಾ ಬೆಳಗಾಂವಕರ ಅವರನ್ನು ಪೊಲೀಸರು ಹೊರಗೆ ಕಳುಹಿಸಿದರು.

Leave a Reply

Your email address will not be published. Required fields are marked *

error: Content is protected !!