Sunday, 8th September 2024

ಯಾರೇ ಕೂಗಾಡಲಿ ಊರೇ ಹೋರಾಡಲಿ ದಿಕ್ಸೂಚಿ ಇಲ್ಲದ ಹಡಗಿನಂತಾದ ಪುರಸಭೆ

ಶರಣಬಸಪ್ಪಾ.ಎನ್ ಕೆ.

ಅಧ್ಯಕ್ಷ ಉಪಾಧ್ಯಕ್ಷರ ಗದ್ದುಗೆ ಖಾಲಿ ಅಧಿಕಾರಿಗಳದ್ದೆ ದರ್ಬಾರ ಅಭಿವೃದ್ದಿ ಶೂನ್ಯ.

ಇಂಡಿ- ರಾಜ್ಯದ ೧೪೫ ಪುರಸಭೆ ಹಾಗೂ ೧೬೦ ಪಟ್ಟಣ ಪಂಚಾಯತಿಗಳಲ್ಲಿ ಮಿಸಲಾತಿ ಸಮಸ್ಯಯಾಗಿ ಅಧ್ಯಕ್ಷ , ಉಪಾಧ್ಯಕ್ಷ ಆಯ್ಕೆ ನಡೆಯದೆ ಕಳೆದ ೧೫ ತಿಂಗಳುಗಳಿ0ದ ಪುರಸಭೆ ಅಭಿವೃದ್ದಿ ಕುಂಠಿತವಾಗಿ ಇಡೀ ಆಡಳಿತ ವ್ಯವಸ್ಥೆ ದಿಕ್ಸೂಚಿ ಇಲ್ಲದ ಹಡಗಿನಂತಾದ ಪುರಸಭೆ ಹಳ್ಳಹಿಡಿದಿದೆ. ಇದರಿಂದ ಸರಕಾರದ ನಡೆಗೆ ಸಾರ್ವಜನಿಕರು ಪಟ್ಟಣದ ವಾಸಿಗಳು ಹಿಡಿಶಾಪ ಹಾಕುವಂತಾಗಿದೆ.

ಕಳೆದ ಸರಕಾರದ ಅವಧಿಯಲ್ಲಿ ಬಿಜೆಪಿ ಮೀಸಲಾತಿ ಸಮಸ್ಯಯಿಂದ ಸುಪ್ರೀಂ ಕೋರ್ಟ ಮೇಟ್ಟಲೇರಿತು. ಸದ್ಯ ಕಾಂಗ್ರೆಸ್ ಸರಕಾರ ಒಂದು ವರ್ಷ ಕಳೆದರೂ ಇದರ ಬಗ್ಗೆ ಚೆಕ್ಕಾರ ಎತ್ತದೆ ತಮ್ಮ ತಮ್ಮ ಖುರ್ಚಿ ಉಳಿಸಿಕೊಳ್ಳುವಲ್ಲಿ ನಿರತವಾಗಿದೆ ವಿನಹ ಸ್ಥಳೀಯ ಆಡಳಿತ ಬಗ್ಗೆ ಅವರಿಗೆ ಬಿಟ್ಟು ಇರ‍್ಯಾರು ಎನ್ನುವಂತಾಗಿದೆ.

ವಾರ್ಡಗಳ ಅಭಿವೃದ್ದಿ ಕುಂಠಿತ-
ಸ್ಥಳೀಯ ಪಟ್ಟಣದಲ್ಲಿ ಸಮಸ್ಯಗಳ ಜೇನು ಗೊಡಂತಾಗಿದೆ. ಮಳೆಗಾಲ ಸಂಭವಿಸಿದ್ದು ಡೇಂಗ್ಯೋದಿAದ ಛಳಿ, ಜ್ವರ ಪಟ್ಟಣದಲ್ಲೆ ದಾಂಗುಡಿ ಇಟ್ಟಿದ್ದು ಪುರಸಭೆ ಮಾತ್ರ ಜಾಣಕುರುಡರಂತೆ ಕಣ್ಣುಚಿ ಕುಳಿತಿದೆ. ವಾರ್ಡಗಳಲ್ಲಿ ಲೈಟ್ ಸಮಸ್ಯಗಳು ಏದುರಾಗಿದ್ದು ವಾರ್ಡದಲ್ಲಿ ಸಾರ್ವಜನಿಕರು ಪುರಸಭೆ ಬಂದು ಲೈಟು ಹಾಕಿ ಎಂದು ಗೋಗೇರದರು ಹಾಲುರ ಮೇಲೆ ಹಾವಾಲ್ತಿ ಎಂಬ ನಾಣ್ನುಡಿಯಂತೆ ಒಬ್ಬರ ಮೇಲ್ಲೋಬ್ಬರು ಹಾಕುತ್ತಾ ಕಳೆದ ೧೫ ದಿನಗಳಿಂದ ವಾರ್ಡ ಜನರು ಕಾರ್ಗತ್ತಲೆಯಲ್ಲಿ ಹಾವು ಚೇಳು ಹುಳಹುಪ್ಪಡಿ ಭಯದಲ್ಲಿ ವಾಸಿಸುತ್ತಿದ್ದಾರೆ.

ಜಿಲ್ಲಾ ಮಾಡುವ ಕನಸು ಹೊತ್ತ ಶಾಸಕ ಯಶವಂತರಾಯಗೌಡ ಪಾಟೀಲ ೪೦ ವರ್ಷ ಅಭಿವೃದ್ದಿಯಿಂದ ವಂಚಿತವಾದ ಇಂಡಿ ಪಟ್ಟಣ ದಶದಿಕ್ಕುಗಳು ಅಭಿವೃದ್ದಿ ಮಾಡಿದ್ದಾರೆ. ಆದರೆ ಸ್ಥಳೀಯ ಪುರಸಭೆಯ ಅವಾಂತರದಿ0ದ ಅಭಿವೃದ್ದಿ ಮಾಡಿದ ಕೆಲಸಗಳು ಹಳ್ಳಹಿಡಿದಿವೆ ಎಂಬುದು ಸಾರ್ವಜನಿಕರ ದೂರಾಗಿದೆ.

ಚುನಾಯಿತರ ಅಧಿಕಾರಾವಧಿ ಮೋಟಕುಗೊಳ್ಳುವ ಆತಂಕ-
ಕಳೆದ ೨೦೨೦ರಲ್ಲಿ ಪುರಸಭೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಂತರ ೨.೫ ವರ್ಷಗಳ ಕಾಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಡಳಿತ ನಡೆಸಿತು. ೨ನೇ ಅವಧಿಗೆ ಮೀಸಲಾತಿ ತೊಡಕಾಗಿ ೧೪ ತಿಂಗಳುಗಳಿ0ದ ಪುರಸಭೆಗಳ ಆಡಳಿತವನ್ನು ಸರಕಾರಿ ಅಧಿಕಾರವನ್ನು ನಡೆಸು ತ್ತಿದ್ದಾರೆ. ಪುರಸಭೆ ಆಯ್ಕೆ ಯಾದ ಪ್ರತಿನಿಧಿಗಳು ಮಾತ್ರ ಈಗ ಇದ್ದೂ ಇಲ್ಲದಂತಾಗಿದೆ ಇದರಿಂದ ಪುರಸಭೆಯ ಸಮಸ್ಯಗಳು ಸಾಕಷ್ಟು ಉಲ್ಭಣಗೊಂಡಿದ್ದು ಯಾರಿಗೆ ಹೇಳಬೇಕ್ರೀ ನಮ್ಮ ಪ್ರಾಬ್ಲಂ ಎನ್ನುವಂತಾಗಿದೆ.

ಬಾಕ್ಸ- ಪುರಸಭೆಯ ವ್ಯಾಪ್ತಿಯಲ್ಲಿ ಅಧ್ಯಕ್ಷ .ಉಪಾಧ್ಯಕ್ಷರಿಲ್ಲದೆ ಇರುವದರಿಂದ್ದ ಸ್ಥಳೀಯ ಸಮಸ್ಯಗಳು ಕಗ್ಗಂಟಾಗಿವೆ. ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಕೇಳುವುದು ಯಾರಿಗೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲ ಇರುವದರಿಂದ ವಾರ್ಡ ಒಳರಸ್ಥೆಗಳು ಮದ್ದನತಾಂಡಾ , ಹಳೆ ಬೊಳೇಗಾಂವ್ ರಸ್ತೆ, ಭೀರಪ್ಪ ನಗರ, ಅಕ್ಕಮಹಾದೇವಿ ನಗರ, ಸರಕಾರಿ ಪ್ರೌಢ ಶಾಲೆಗೆ ಹೋಗುವ ರಸ್ತೆಗಳು ಕೆಸರು ಗದ್ದೆಯಾಗಿವೆ ಪುರಸಭೆ ಈ ಹಿಂದಿನ0ತೆ ಕಾರ್ಯನಿರ್ವಹಿಸದೆ ಇರುವದರಿಂದ್ದ ನಮಗೂ ವಾರ್ಡನಲ್ಲಿ ನಾಚೀಕೆಯಾಗುತ್ತಿದೆ. ಕೂಡಲೆ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಕೀಲರನ್ನು ನೇಮಿಸಿ ಶೀಘ್ರ ಸಮಸ್ಯ ಪರಿಹರಿಸಬೇಕು. ಈ ಕುರಿತು ಇಂಡಿ ಮತಕ್ಷೇತ್ರ ಶಾಸಕರಾದ ಯಶವಂತರಾಯಗೌಡ ಪಾಟೀಲರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಸ್ಥಳೀಯ ಆಡಳಿತ ಸಮಸ್ಯ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ.

Leave a Reply

Your email address will not be published. Required fields are marked *

error: Content is protected !!