Friday, 21st June 2024

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರ ಚುನಾವಣೆ: ಏಳು ನಾಮಪತ್ರ ಸಲ್ಲಿಕೆ

ಕಲಬುರಗಿ : ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 8 ಕೊನೆಯ ದಿನವಾಗಿದ್ದ ಕಾರಣ, ಕಳೆದ ಬುಧವಾರ ಒಟ್ಟು 7 ನಾಮಪತ್ರ ಸಲ್ಲಿಕೆ ಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳಾದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅವರು ತಿಳಿಸಿದ್ದಾರೆ. ಅಕ್ಟೋಬರ್ 28 ರಂದು ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ.

ಭಾರತೀಯ ಜನತಾ ಪಕ್ಷದಿಂದ ಶಶೀಲ ಜಿ. ನಮೋಶಿ 4 ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಶರಣಪ್ಪ ಮಟ್ಟೂರು 2 ನಾಮಪತ್ರ ಹಾಗೂ ಜನತಾದಳ (ಜಾತ್ಯತೀತ) ಪಕ್ಷದಿಂದ ತಿಮ್ಮಯ್ಯ ಪುರ್ಲೆ ಅವರು 1 ನಾಮಪತ್ರಗಳನ್ನು ಸಲ್ಲಿಸಿ ದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇದೂವರೆಗೆ ಒಟ್ಟಾರೆ ಮೂವರು ಅಭ್ಯರ್ಥಿಗಳಿಂದ ಏಳು ನಾಮಪತ್ರ ಸಲ್ಲಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!