Tuesday, 23rd April 2024

ಹುಬ್ಬಳ್ಳಿಯ ಶೆಟ್ಟರ್ ಗೆಲ್ಲುತ್ತಾರೆ, ಆದರೆ ಬಿಜೆಪಿ ಸರ್ಕಾರ ಬರುತ್ತದೆ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿ: ‘ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಗೆಲ್ಲುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ’ ಎಂದು ಸಂಸದೆ ಮಂಗಲಾ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 13 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಸರ್ಕಾರ ಬರಲಿದೆ’ ಎಂದರು.

ನಿಮ್ಮ ಬೀಗರಾದ ಜಗದೀಶ ಶೆಟ್ಟರ್ ಬಗ್ಗೆ ಹೇಳಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಹುಬ್ಬಳ್ಳಿ ರಾಜಕಾರಣ, ಅಲ್ಲಿ ಶೆಟ್ಟರ್ ಅವರು ಗೆಲ್ಲುತ್ತಾರೆ’ ಎಂದರು.

error: Content is protected !!