Friday, 21st June 2024

ಬೈಕ್ – ಲಾರಿ ಡಿಕ್ಕಿ: ಮೂವರ ಸಾವು

ಶಿವಮೊಗ್ಗ: ಭದ್ರಾವತಿ ತಾಲೂಕು ಕಲ್ಲಿಹಾಳ್ ಹಾಗೂ ಅರಹತೊಳಲು ಗ್ರಾಮದ ನಡುವೆ ಕಳೆದ ರಾತ್ರಿ ಲಾರಿ ಹಾಗೂ ಎರಡು ಬೈಕ್​​ಗಳ ನಡುವೆ ಡಿಕ್ಕಿ ಸಂಭವಿಸಿ ಸ್ಥಳದ ಲ್ಲಿಯೇ ಮೂವರು ಸಾವನ್ನಪ್ಪಿ, ಓರ್ವ ಗಾಯಗೊಂಡಿದ್ದಾರೆ.

ಮರದ ತುಂಡು ತುಂಬಿಕೊಂಡು ಹೊರಟಿದ್ದ ಲಾರಿಗೆ ಬೈಕ್​ಗಳು ಮಧ್ಯದಿಂದ ಬಂದು ಡಿಕ್ಕಿ ಹೊಡೆದಿವೆ.

ಒಂದು ಬೈಕ್​​ನಲ್ಲಿದ್ದ ಮೂವರು ಅಪ್ರಾಪ್ತರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಭದ್ರಾವತಿ ತಾಲೂಕು ಜಂಬರಘಟ್ಟ ಗ್ರಾಮದ ಶಶಾಂಕ್(17), ಯಶವಂತ್ (17) ಹಾಗೂ ವಿಕಾಸ್(17) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್​​ನಲ್ಲಿದ್ದ ಅರದೊಟ್ಲು ಗ್ರಾಮದ ಗಗನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸ ಲಾಗಿದೆ.

ಮೂವರು ಸ್ನೇಹಿತರು ಒಂದೇ ಬೈಕ್​​ನಲ್ಲಿ ಬರುತ್ತಿದ್ದರು. ಲಾರಿ ಸಹ ಕಲ್ಲಿಹಾಳ್ ಕಡೆಯಿಂದ ಕೈಮರಕ್ಕೆ ಬರುತ್ತಿತ್ತು. ಬೈಕ್​​ನಲ್ಲಿದ್ದವರು ಲಾರಿಯನ್ನು ಹಿಂದಿಕ್ಕಲು ಹೋದಾಗ ಮುಂದೆ ಬೈಕ್ ಬಂದಿದೆ.

ಈ ವೇಳೆ ಬೈಕ್ ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿ ಚಲಿಸುತ್ತಿದ್ದ ಲಾರಿಯ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!