Friday, 29th March 2024

ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವಕ್ಕೆ ಸಕಲ ಸಿದ್ಧತೆ

ತಿಪಟೂರು : ಕಾಯಕಯೋಗಿ ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವವನ್ನು ಜನವರಿ ೧೪ ಮತ್ತು ೧೫ ರಂದು ವಿಜೃಂಭಣೆಯಿ0ದ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಭಾನುವಾರ ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಯಂತಿ ಮಹೋತ್ಸವವು ರಾಜ್ಯಮಟ್ಟದಲ್ಲಿ ನಡೆಯುವುದರಿಂದ ರೈತರಿಗೆ ಅನುಕೂಲ ವಾಗುವಂತಹ ಕೃಷಿ ಉಪಕರಣಗಳು, ಸಲಕರಣೆಗಳ ಪರಿಚಚಯ, ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಪುಸ್ತಕ ಪ್ರೇಮಿಗಳಿಗೆ ಅನುಕೂಲವಾಗುವಂತೆ ಪುಸ್ತಕಗಳ ಪ್ರದರ್ಶನ ಮಾರಾಟ ವನ್ನು ಮಾಡಲಾಗುವುದು. ಕಾರ್ಯಕ್ರಮಕ್ಕೆ ೩ ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆಯನ್ನು ಹೊಮದಿದ್ದು ಸಕಲ ಸಿದ್ದತೆ ಗಳನ್ನು ಉಪಸಮಿತಿಗಳನ್ನು ರಚನೆ ಮಾಡಿ ಕಾರ್ಯಪ್ರವೃತ್ತ ರಾಗಿದ್ದಾರೆ. ಕಾರ್ಯಕ್ರಮದ ಪ್ರಾರಂಭವನ್ನು ಜಾನಪದ ಕಲಾ ತಂಡಗಳೊ0ದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಮಾಡಲು ನಿಶ್ಚಯಿಸಿದ್ದು ಪ್ರತಿಯೊಬ್ಬರ ಸಹಕಾರ ಅಗತ್ಯ ವಾಗಿದೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಬೊರ್‌ವೆಲ್ ಮಧುಸೂಧನ್ ಮಾತನಾಡಿ ಜಯಂತಿ ಆಚರಣೆಗೆ ಅವಕಾಶ ದೊರೆತಿರುವುದು ನಿಜಕ್ಕೂ ಹೆಮ್ಮಯ ಸಂಗತಿ. ರಾಜ್ಯದ ಗಣ್ಯಾತಿಗಣ್ಯರು, ಮಠಾಧೀಶರುಗಳು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಜ್ಯಾತ್ಯಾತೀತವಾಗಿ ಬಂದು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ಮಾದಿಹಳ್ಳಿ ದಯಾನಂದ್, ದೊಡ್ಡಯ್ಯನಪಾಳ್ಯದ ಸೋಮ ಶೇಖರ್, ದಕ್ಷಿಣ ಮೂರ್ತಿ, ನವಿಲೆ ಪರಮೇಶ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಮಾಜಿ ಜಿ.ಪಂ.ಸದಸ್ಯ ತ್ರಿಯಂಬಕ, ಕೆರೆಗೋಡಿ ದೇವರಾಜು, ಶಿವಪ್ಪ, ಕಿರುತೆರೆ ನಟ ದಯಾನಂದಸಾಗರ್, ಜ್ಯೋತಿಗಣೇಶ್, ಹೊಗವನಘಟ್ಟ ಯೋಗಣ್ಣ, ಕೆ.ಟಿ.ಶಾಂತಕುಮಾರ್, ಅನಗೊಂಡನಹಳ್ಳಿ ತ್ರಿವೇಣಿ ಇದ್ದರು.

Read E-Paper click here

 

error: Content is protected !!