Monday, 26th February 2024

ಕೃಷಿ ಹೊಂಡಕ್ಕೆ ಹಾರಿ ಆರು ಮಂದಿ ಆತ್ಮಹತ್ಯೆ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದೆ. ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ಭಾದೆ ತಾಳದೆ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಶಂಕಿಸಲಾಗುತ್ತಿದ್ದು, ದಂಪತಿಗಳಿಬ್ಬರು ತಮ್ಮ 4 ಮಕ್ಕಳ ಜತೆಗೂಡಿ ಕೃಷಿ ಹೊಂಡಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ.

ಮೃತರನ್ನ ಭೀಮರಾಯ ಸುರಪುರ (45), ಪತ್ನಿ ಶಾಂತಮ್ಮ (36), ಮಕ್ಕಳಾದ ಸುಮಿತ್ರಾ (12), ಶ್ರೀದೇವಿ (12), ಲಕ್ಷ್ಮಿ (8), ಶಿವರಾಜ್‌ (9) ಎಂದು ಗರುತಿಸಲಾಗಿದೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!