Saturday, 27th July 2024

ಕಾಡುಗೊಲ್ಲ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗಗಳಿಗೆ ನ್ಯಾಯ

ಮಧುಗಿರಿ : ಶಿರಾ ಉಪಚುನಾವಣೆಯಲ್ಲಿ ರಾಷ್ಟಿçÃಯ ಪಕ್ಷದವರಾಗಲಿ ಅಥವಾ ಪ್ರಾದೇಶಿಕ ಪಕ್ಷದವರಾಗಲಿ ಕಾಡುಗೊಲ್ಲ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಕಾಡುಗೊಲ್ಲರ ಒಕ್ಕೂಟ ರಾಜ್ಯ ಸಂಘಟನ ಕಾರ್ಯದರ್ಶಿ ಜಿ.ಎಂ.ಈರಣ್ಣ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಾ ಉಪಚುನಾವಣೆಯಲ್ಲಿ ಎರಡು ರಾಷ್ಟಿçÃಯ ಪಕ್ಷ ಹಾಗೂ ಒಂದು ಪ್ರಾದೇಶಿಕ ಪಕ್ಷದವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ, ಬುಡಕಟ್ಟು ನೆಲೆಯುಳ್ಳ ಸುಮಾರು 40 ರಿಂದ 46 ಸಾವಿರ ಜನಸಂಖ್ಯೆ ಯುಳ್ಳ ಹಾಗೂ ಮತದಾರರ ಪಲಿತಾಂಶವನ್ನು ನಿರ್ಣಾಯಕ ಪಲಿತಾಂಶವನ್ನು ನೀಡುವ ಕಾಡು ಗೊಲ್ಲರ ಅಭ್ಯರ್ಥಿಗೆ ಟಿಕೇಟ್ ನೀಡಿದರೆ ಸದ್ಯದ ಪರಿಸ್ಥಿತಿಯಲ್ಲ ಸೂಕ್ತವಾಗಿರುತ್ತದೆ.

ಕಾಡುಗೊಲ್ಲ ಸಮುದಾಯವು ರಾಜಕೀಯವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದು ಳಿದಿರುತ್ತಾರೆ. ಇವರನ್ನು ಪರಿಶಿಷ್ಟ ಪಂಗಡಗಳಿಗೆ ಸೇರಿಸಬೇಕು ಮತ್ತು ಇವರನ್ನು ಮುಖ್ಯ ವಾಹಿನಿಗೆ ತರಬೇಕು ಎಂದು ಎಲ್ಲಾ ಪಕ್ಷಗಳು ಹೇಳಿಕೊಂಡು ಬರುತ್ತಲೇ ಇದೆ.

ಇಂತಹ ಸಂದರ್ಭದಲ್ಲಿ ನಮ್ಮ ಕಾಡುಗೊಲ್ಲರ ಸಮುದಾಯದ ಪಿ.ಎಚ್.ಡಿ ಮಾಡಿರುವ ವಿದ್ಯಾವಂತ, ಬುದ್ಧಿವಂತ ಹಾಗೂ ಆರ್ಥಿಕವಾಗಿ ಸಬಲೀಕರಣವಾಗಿರುವ ಡಾ.ಶಿವಕುಮಾರ್ ಅವರಿಗೆ ವಿಧಾನ ಸಭೆಗೆ ಸ್ಪರ್ಧಿಸುವಂತೆ ಅವಕಾಶ ಕಲ್ಪಿಸಿ ಕಾಡು ಗೊಲ್ಲ ಸಮುದಾಯಕ್ಕೆ ರಾಜಕೀಯ ಶಕ್ತಿ ನಿಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!