Sunday, 21st April 2024

ದೆಹಲಿಗೆ ಬನ್ನಿ ಮಾತಾಡೋಣ ಎಂದು ಭರವಸೆ ನೀಡಿದ ಅಮಿತ್ ಶಾ

ಬೆಳಗಾವಿ: ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅತೃಪ್ತ ಶಾಸಕ ಅರವಿಂದ ಬೆಲ್ಲದ ಭೇಟಿಯಾದರು.

ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾ ಭೇಟಿಯಾದ ಅರವಿಂದ ಬೆಲ್ಲದ, ಶಾ ಅವರಿಗೆ ಹಾರ ಹಾಕಿ, ಸನ್ಮಾನಿಸಿದರು. ಈ ವೇಳೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು.

ಸಂಪುಟ ವಿಸ್ತರಣೆ ವೇಳೆ ಕಡೆಗಣಿಸಿರುವ ಸಂಬಂಧ ಅಳಲು ಹೇಳಿಕೊಳ್ಳುತ್ತಿದ್ದಂತೆ ದೆಹಲಿಗೆ ಬರುವಂತೆ ಶಾ ಸೂಚನೆ ನೀಡಿದ್ದಾರೆನ್ನಲಾಗಿದೆ. ಅಮಿತ್‌ ಶಾರೊಂದಿಗೆ ಭೇಟಿಗೆ ಸಮಯಾವಕಾಶ ನೀಡುತ್ತಿದ್ದಂತೆ ಖುಷಿಯಾದ ಅರವಿಂದ ಬೆಲ್ಲದ ಅವರು, ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ನವದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!