Saturday, 27th July 2024

ತಾಲ್ಲೂಕಿನಲ್ಲಿ ಉತ್ಸಾಹದ ಮತದಾನ: ಶೇ 81.12 ರಷ್ಟು ಮತ ಚಲಾವಣೆ

ಚಿಕ್ಕನಾಯಕನಹಳ್ಳಿ : ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ವಿಧಾನಸಭಾ ಚುನಾವಣೆಗೆ ಮತದಾರರರಿಂದ ಉತ್ತಮ ಹಾಗು ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.81.12 ರಷ್ಟು ಮತದಾನವಾಗಿದೆ. ಕೆಲೆವೆಡೆ ತಾಂತ್ರಿಕ ಸಮಸ್ಯೆಯಿಂದ ಮತದಾನ ಪ್ರಕ್ರಿಯೆ ವಿಳಂಬ ವಾಗಿದ್ದು ನಂತರ ಮತದಾನ ಬಿರುಸಿನಿಂದ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಹುಳಿಯಾರು ಸಮೀಪದ ಬಳ್ಳೇಕಟ್ಟೆ ಯಲ್ಲಿ, ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರದಲ್ಲಿ, ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪಟ್ಟಣದಲ್ಲಿ ಹಕ್ಕು ಚಲಾಯಿಸಿದರು. ಪಟ್ಟಣದ ಉರ್ದು ಶಾಲೆಯ ಮತಕಟ್ಟೆಯಲ್ಲಿ ಬೆಳಗ್ಗೆ ಯಂತ್ರದಲ್ಲಿ ತಾಂತ್ರಿಕ ದೋಷದಿಂದ ಮತದಾನ ವಿಳಂಬವಾಯಿತು. ಅಧಿಕಾರಿಗಳು ಸರಿಪಡಿಸಿ ಮತದಾನಕ್ಕೆ ಅವಕಾಶ ನೀಡಿದರು. ಹೆಸರಹಳ್ಳಿ ಗ್ರಾಮ ಸೇರಿದಂತೆ ೮ ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಸಂಜೆ ೬ ಗಂಟೆಯ ನಂತರವೂ ಮತದಾನ ನಡೆದಿರುವ ಬಗ್ಗೆ ವರದಿಯಾಗಿದೆ.

ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ನಿಗದಿತ ಸಮಯ ೭ ಗಂಟೆಗೆ ಮತದಾನ ಪ್ರಾರಂಭ ವಾಯಿತು. ಮದ್ಯಾಹ್ನ ೩ ಗಂಟೆ ಹೊತ್ತಿಗೆ ಶೇ ೬೧.೪೫, ಸಂಜೆ ೫ ಗಂಟೆ ಹೊತ್ತಿಗೆ ೭೮.೮೩, ಮತದಾನದ ಪ್ರಮಾಣ ದಾಖಲಾ ಯಿತು. ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡಿದರೆ ಶತಾಯುಷಿಗಳು ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಬೆಳಗ್ಗೆಯಿಂದ ಬಿಸಿಲ ಝಳ ಹಾಗು ಸೆಖೆಯಿಂದ ಜನ ತತ್ತರಿಸಿದ್ದು ಮತಗಟ್ಟೆಗಳಲ್ಲಿ ಕಂಡುಬ0ದಿತು.

ವಿಶೇಷ ಚೇತನರಿಗೆ ಮತದಾನಕ್ಕೆ ಅನುಕೂಲವಾಗುವಂತೆ ಸೌಕರ್ಯಗಳ ಏರ್ಪಾಡು ಮಾಡಲಾಗಿತ್ತು. ಸೂಕ್ಷö್ಮ ಮತಗಟ್ಟೆ ಗಳಲ್ಲಿ ಕೇಂದ್ರಿಯ ಅರೆಸೇನಾ ಪಡೆ ನಿಯೋಜಿಸಲಾಗಿತ್ತು. ಹಾಗು ಸಿಸಿ ಟಿವಿ, ಕ್ಯಾಮಾರ ಅಳವಡಿಸಿ ರಾಜಕೀಯ ಪುಡಾರಿಗಳ ಆಟಕ್ಕೆ ಬ್ರೇಕ್ ಹಾಕಿ ೧೦೦ ಮೀಟರ್ ಅಂತರದಲ್ಲಿ ಯಾರಿಗೂ ನಿಲ್ಲದಂತೆ ಭದ್ರತಾ ಸಿಬ್ಬಂದಿಗಳು ತಾಕೀತು ಮಾಡಿದ್ದರು. ಪ್ರತಿ ಮತಗಟ್ಟೆಗಳಲ್ಲೂ ಮತಗಟ್ಟೆ ಅಧಿಕಾರಿ, ಆರೋಗ್ಯ, ಆಶಾ ಕಾರ್ಯಕರ್ತೆಯರು ಪೋಲೀಸ್ ಸಿಬ್ಬಂದಿ ಇದ್ದರು.

ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಭದ್ರತಾ ಕೊಠಡಿಗಳಲ್ಲಿ ಕ್ರೋಢಿಕರಿಸಿ ನಂತರ ತುಮಕೂರಿನ ಮತ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆಯೊಂದಿಗೆ ಕಳುಹಿಸಲಾಗು ವುದು. ಮೇ ೧೩ ರಂದು ತುಮಕೂರಿನಲ್ಲಿ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

error: Content is protected !!