Tuesday, 10th December 2024

ಕಸ ಬೇರ್ಪಡಿಸಲು ಪ್ರತಿ ಮನೆಗೆ ಎರಡು ಕಸದ ಬುಟ್ಟಿ: ಜಿ.ಎನ್ ಅಣ್ಣಪ್ಪಸ್ವಾಮಿ

ಗುಬ್ಬಿ : ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಮನೆ ಮನೆಗೆ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಲು ಪ್ರತಿ ಮನೆಗೆ ಎರಡು ಕಸದ ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾ ಯಿತಿ ಅಧ್ಯಕ್ಷ ಜಿ.ಎನ್ ಅಣ್ಣಪ್ಪಸ್ವಾಮಿ ತಿಳಿಸಿದರು.
ಪಟ್ಟಣ ಪಂಚಾಯತಿ ವ್ಯಾಪ್ತಿಯ 19ನೇ ವಾರ್ಡ್ ನ ಬಿಲ್ಲೆಪಾಳ್ಯದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಏರ್ಪ ಡಿಸಿದ್ದ ಕಸದ ಬುಟ್ಟಿ ಹಂಚಿಕೆ ಕಾರ್ಯ ಕ್ರಮದಲ್ಲಿ ಪ್ರತಿ ಕುಟುಂಬಗಳಿಗೆ ಕಸದ ಬುಟ್ಟಿಗಳನ್ನು ನೀಡಿ ಮಾತನಾ ಡಿದ ಅವರು, ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಹಾಗೂ ಒಣ ಕಸ ಬೇರ್ಪ ಡಿಸಿ ಬೀದಿಯಲ್ಲಿ ಬರುವ ಪಟ್ಟಣ ಪಂಚಾಯಿತಿಯ ಕಸದ ವಾಹನಕ್ಕೆ ನೀಡುವುದರ ಮೂಲಕ ಪಟ್ಟಣದಲ್ಲಿ ಕಸದಿಂದ ಉಂಟಾಗುವ ಸಮಸ್ಯೆ ಯನ್ನು ನಿವಾರಣೆ ಮಾಡಬಹುದಾಗಿದೆ.
ಜೊತೆಗೆ ಪ್ರತಿಯೊಬ್ಬರಿಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿ ಸಾಂಕ್ರಾಮಿಕ ರೋಗಗಳಿಗೆ ಒಳಗಾಗದೆ ಆರೋಗ್ಯ ವನ್ನು ಕಾಪಾಡಲು ಅನುಕೂಲ ವಾಗುತ್ತದೆ. ಈಗಾಗಲೇ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯು ತ್ತಿರುವುದರಿಂದ ರಸ್ತೆಯಲ್ಲಿ ಮಣ್ಣಿನಿಂದ ದೂಳು ಬರುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆ ಯಲ್ಲಿ ಟ್ಯಾಂಕರ್ ಮೂಲಕ ರಸ್ತೆಯಲ್ಲಿ ಧೂಳು ಬಾರದಂತೆ ನೀರನ್ನು ಸಿಂಪಡಣೆ ಮಾಡುವ ವ್ಯವಸ್ಥೆಯನ್ನು ಮಾಡಿಸುವುದಾಗಿ ಹೇಳಿದರು.
ಪಟ್ಟಣ ಪಂಚಾಯಿತಿ ನೂತನ ಮುಖ್ಯ ಅಧಿಕಾರಿ ಶಂಕರ್ ಮಾತನಾಡಿ  ಪ್ರತಿ ವಾರ್ಡ್ ನ ಬೀದಿ ಬೀದಿಗಳಲ್ಲಿಯೂ ಸ್ವಚ್ಛತೆಯ ಬಗ್ಗೆ ಜಾಗೃತಿ ಕಾರ್ಯ ಕ್ರಮಗಳನ್ನು ಮಾಡಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಜಿ ಆರ್ ಶಿವಕುಮಾರ್, ಮಹಮದ್ ಸಾಧಿಕ್,  ಸುನಂದ ರಾಮಸ್ವಾಮಿ, ಬಸವರಾಜು, ಪ್ರಕಾಶ್, ಆರೋಗ್ಯ ನೀರಿಕ್ಷಕಿ ವಿದ್ಯಾಶ್ರೀ ಬಡಿಗೇರ್, ವಿಶ್ವ ಮಾನವ ಹಕ್ಕುಗಳ ಹಾಸನ ಜಿಲ್ಲಾಧ್ಯಕ್ಷ ಜಯಚಂದ್ರ ಸೇರಿದಂತೆ ಗ್ರಾಮಸ್ಥರು. ಇದ್ದರು.