Saturday, 27th July 2024

ವಾಜಪೇಯಿ ನದಿ ಜೋಡಣೆಯ ಕನಸನ್ನು ಕಂಡಿದ್ದರು: ಶಿವಪ್ರಸಾದ್

ತುಮಕೂರು: ಮಾಜಿ ಪ್ರಧಾನಿ ವಾಜಪೇಯಿ ನದಿ ಜೋಡಣೆಯ ಕನಸನ್ನು ಕಂಡಿದ್ದರು ಎಂದು ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ತಿಳಿಸಿದರು.

ನಗರದಲ್ಲಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ, ತುಮಕೂರು ನಗರ ಮಂಡಲ ವತಿಯಿಂದ, ಹಮ್ಮಿಕೊಂಡಿದ್ದ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ನೀರಾವರಿ ಯೋಜನೆಗಳು, ನದಿ ಜೋಡಣೆಯ ಕಲ್ಪನೆ, ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರವನ್ನು ಪೂರೈಸುವಿಕೆ ಹೀಗೆ ಹತ್ತು ಹಲವಾರು ರೈತ ಚಿಂತನೆಯ ಮೂಲಕ ರೈತರ ಅಭ್ಯುದಯಕ್ಕೆ ಕಾರ್ಯಕ್ರಮಗಳನ್ನು ರೂಪಿಸಿದ್ದ ಸನ್ಮಾನ್ಯ ಅಟಲ್‌ಜೀ ಯವರ ಆಶಯದಂತೆ ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಡೆದುಕೊಳ್ಳುತ್ತಿವೆ ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಸನ್ಮಾನ್ಯ ನರೇಂದ್ರ ಮೋದಿಯ ಕೇಂದ್ರ ಸರಕಾರಅಟಲ್‌ಜೀ ಜಯಂತಿಯ ಅಂಗ ವಾಗಿ ಸುಮಾರು 11 ಕೋಟಿ ರೈತ ಖಾತೆಗಳಿಗೆ ನೇರವಾಗಿ ಹಣ ಜಮಾವಣೆ ಮಾಡಿ ರೈತರಿಗೆ ಅನುಕೂಲ ಮಾಡುವ ಮೂಲಕ ಅಟಲ್‌ಜೀ ಅವರಿಗೆ ಗೌರವ ಸರ್ಮಪಿಸುತ್ತಿವೆ. ಅಟಲ್‌ಜೀಯವರ ದೇಶ ಕಂಡAತಹ ಮಹಾನ್ ವ್ಯಕ್ತಿತ್ವ. ಈ ದೇಶದ ಅಭಿವೃದ್ಧಿಗೆ ಅವರು ಹಾಕಿದ ಅಡಿಪಾಯ ಸುಭದ್ರವಾಗಿದೆ. ಆ ಅಡಿಪಾಯದ ಆಧಾರದ ಮೇಲೆ ಸರ್ಕಾರ ಕಾರ್ಯ ನಿರ್ವಹಿಸಿಕೊಂಡು ಹೋದರೆ ಸಾಕು ದೇಶದ ಸುಭದ್ರ ಸುಸ್ಥಿತಿಯಲ್ಲಿರುತ್ತದೆ. ಅವರ ಒಡನಾಡಿಯಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ನನಗಿದೆ. ಎಲ್ಲ ರೊಂದಿಗೂ ಬಹಳ ಸಹಜವಾಗಿ ಸೌಮ್ಯದಿಂದ ನಡೆದುಕೊಳ್ಳುತ್ತಿದ್ದರು ಎಂದು ಹಲವಾರು ನೆನಪುಗಳನ್ನು ಮೆಲುಕು ಹಾಕಿದರು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್‌g ಮಾತನಾಡಿ, ಅಟಲ್‌ಜೀಯವರು ರಾಷ್ಟ್ರ ಕಂಡಂತಹ ಅದ್ವೀತಿ ವ್ಯಕ್ತಿ ರಾಜಕೀಯವನ್ನು ಒಂದು ತಪಸ್ಸಿನ ರೀತಿಯಲ್ಲಿ ಮಾಡಿದ ಖಾವಿ ತೊಡದ ಸಂತ ಅಟಲ್‌ಜೀ. ಸ್ವಪಕ್ಷ ದ್ವೇಷವೇ ಹೆಚ್ಚಿರುವ ಇವತ್ತಿನ ಕಾಲಘಟ್ಟದಲ್ಲಿ ವಿರೋಧ ಪಕ್ಷಗಳನ್ನು ಪ್ರೀತಿಯಿಂದ ವಿಶ್ವಾಸದೊಂದಿಗೆ ಉನ್ನತ ಮಟ್ಟದ ರಾಜಕೀಯದ ಮೂಲಕ ರಾಷ್ಟç ನಿರ್ಮಾಣ ಮಾಡುವ ಅವರ ನಡತೆಯನ್ನು ಎಲ್ಲರೂ ಸಹ ಮೈಗೂಡಿಸಿಕೊಳ್ಳುವ ಅನಿರ್ವಾಯತೆ ಇಂದಿನ ಪರಿಸ್ಥಿತಿಗೆ ಅಗ್ಯವಾಗಿದೆ. ಅಂತಹ ಮಹಾನ್ ಚೇತನ ಅಟಲ್ ಜೀಯವರ ಜಯಂತಿಯ ಈ ಶುಭ ಸಂದರ್ಭದಲ್ಲಿ ರಕ್ತದಾನ ದಂತಹ ಶ್ರೇಷ್ಠ ಸೇವಾ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ರಕ್ತದಾನ ಮಾಡುವ ಎಲ್ಲಾ ನನ್ನ ಸನ್ಮಿತ್ರರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತರಿಗೆ ಸನ್ಮಾನ ಮಾಡಲಾಯಿತು ಮತ್ತು ಸುಮಾರು 50ಕ್ಕೂ ಅಧಿಕ ಸ್ವಯಂ ಪ್ರೇರಿತ ದಾನಿಗಳು ರಕ್ತದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷರಾದ ಹನುಮಂತರಾಜು, ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ರುದ್ರೇಶ್, ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸ್ನೇಕ್ ನಂದೀಶ್, ಟೂಡಾ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ, ಮುಖಂಡ ರಾದ ಕೃಷ್ಣಪ್ಪ, ಗೋಪಾಲ್‌ಗೌಡ, ತರಕಾರಿ ಮಹೇಶ್, ರವೀಶÀಯ್ಯ, ಸಿ.ಎನ್.ರಮೇಶ್, ರಾಜೀವ್, ಗಣೇಶ್, ಪ್ರೀತಂ, ವೇದ ಮೂರ್ತಿ, ನಾಗೇಂದ್ರ, ರಕ್ಷಿತ್, ರೂಪೇಶ್, ಪಾಲಿಕೆ ಸದಸ್ಯರು. ವಿವಿಧ ಪಧಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!