Tuesday, 3rd December 2024

Vijayapura News: ಮುಖ್ಯಮಂತ್ರಿಗಳ ವಿಶೇಷ ಅನುದಾನ ಸರಿಯಾಗಿ ಸದ್ಬಳಕೆ ಮಾಡಿ- ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ

ಇಂಡಿ: ಮುಖ್ಯ ಮಂತ್ರಿಗಳ ವಿಶೇಷ ಮುಖ್ಯಮಂತ್ರಿಗಳ ವಿಶೇಷ ಅನುದಾನ ಸರಿಯಾಗಿ ಸದ್ಬಳಕೆ ಮಾಡಿ- ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ಸರಿಯಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ದಿಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಸರಕಾರದ ಅನುಧಾನ ಅನುಪಾತದಲ್ಲಿ ಮೂಲಭೂತ ಸೌಲಭ್ಯಗಳ ಕಡೆಗೆ ಹೆಚ್ಚು ಆದ್ಯತ್ಯೆ ಇಟ್ಟುಕೊಂಡು ಸಾರ್ವ ಜನಿಕರಿಗೆ ಯಾವುದೇ ವಿಧದಲ್ಲಿ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ. ತಾಲೂಕಿನಾದ್ಯಂತ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರಿಗೆ ಸಮಸ್ಯಯಾಗಿದೆ ಮುಂದಿನ ದಿನಗಳಲ್ಲಿ ಬೇರೆ ವಿಧದಲ್ಲಿ ಅನುಧಾನ ತಂದು ರಸ್ತೆಗಳ ಅಭಿವೃದ್ದಿಪಡಿಸುತ್ತೇನೆ.

ವಿಜಯಪೂರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಾಷ್ಟ್ರೀಯ ಹೆದ್ದಾರಿ ಸಣ್ಣ ಪುಟ್ಟ ಬ್ರಿಜ್‌ಗಳ ಕಾಮಗಾರಿ ಪ್ರಾರಂಭ ವಾಗಿವೆ. ಆದರೂ ರಸ್ತೆ ತಗ್ಗು ದಿನ್ನೆಯಿಂದ ವಾಹನಗಳ ಸವಾರರಿಗೆ ತೊಂದರೆ ಅನುಭವಿಸು ತ್ತಿದ್ದಾರೆ ಇದ್ದ ಪರಸ್ಥಿತಿ ಯಲ್ಲಿಯೇ ರೋಡ್ ಪ್ಯಾಚ್ ವರ್ಕಮಾಡಿ ಸುಗಮಸಂಚಾರಕ್ಕೆ ಅನುಕೂಲ ಕಲ್ಪಿಸಿ ಎಂದು ಲೋಕೋ ಪಯೋಗಿ ಇಲಾಖೆ ಅಧಿಕಾರಿ ದಯಾನಂದ ಮಠ ಅವರಿಗೆ ಶಾಸಕರು ಸೂಚನೆ ನೀಡಿದರು.

ವಸತಿ ನಿಲಯಗಳಲ್ಲಿ ಬಡಮಕ್ಕಳು ವಿಧ್ಯಾರ್ಜನೆಗಾಗಿ ಬಂದಿರುತ್ತಾರೆ ಅವರಿಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡಿ ಮಕ್ಕಳು ದೇವರ ಸಮಾನ ನಿಜವಾದ ದೇವರನ್ನು ಮಕ್ಕಳಲ್ಲಿ ಕಾಣಿ ಎಂದು ಬಿಸಿ.ಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳ ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳ ಸ್ಥತಿಗತಿ ಕುರಿತು ಚರ್ಚಿಸಿದ ಶಾಸಕರು ಮಕ್ಕಳ ಯೋಗಕ್ಷೇಮ ಮುಖ್ಯ ಕಟ್ಟಡಗಳ ಸಂಪೂರ್ಣ ಶಿಥೀಲಾವ್ಯವಸ್ಥೆ ಇದ್ದರೆ ನೂತನವಾಗಿ ನಿರ್ಮಿಸಿ ಅಥವಾ ಅಲ್ಪಸ್ವಲ್ಪ ರೀಪೇರಿ ಇದ್ದರೆ ಕೂಡಲೆ ಕ್ರಮಕೈಗೊಳ್ಳಿ ಎಂದರು.

ಪಟ್ಟಣದ ೨೪+೭ ನೀರು ಸರಿಯಾಗಿ ಸಾರ್ವಜನಿಕರಿಗೆ ಸಮರ್ಪಕ ಪೂರೈಸಲಾಗುತ್ತಿದ್ದೆಯೇ ಸರಿಯಾಗಿ ವಾರ್ಡಗಳಿಗೆ ಬರುತ್ತಿಲ್ಲ ಎಂಬ ಸುದ್ದಿ ಕೇಳಿರುವೆ ಮಳೆಗಾಲದಲ್ಲಿ ನೀರು ಬಿಡದಿದ್ದರೆ ಬೇಸಿಗೆಯ ಪರಸ್ಥಿತಿ ಹೇಗೆ ? ನೀರು ಪೂರೈ ಸದೆ ಇರಲು ಕಾರಣವೇನು ಕೂಡಲೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ತಾಕೀತು ಮಾಡಿದರು.

ಮೇಗಾಮಾರುಕಟ್ಟೆ ನಿರ್ಮಾಣವಾಗಿದ್ದು ಇದು ಪುರಸಭೆಗೆ ಬರುವ ಆದಾಯ ಕೂಡಲೆ ಮಳಿಗೆಗಳ ಬಾಡಿಗೆ ನೀಡಿ ಪುರಸಭೆಯ ಆದಾಯ ಹೆಚ್ಚಿಸಿಕೊಳ್ಳಿ ಇದರ ಬಗ್ಗೆ ನನಗಿಂತ ನಿಮಗೆ ಹೆಚ್ಚಿನ ಜವಾಬ್ದಾರಿ ಇರಬೇಕು ಪದೆ ಪದೆ ನಾನೇ ಒತ್ತಾಯ ಮಾಡುವುದು ಸರಿಯಲ್ಲ.

ಪಟ್ಟಣದಲ್ಲಿ ಇಂಡಿಯಿಂದ ನೂರಾರು ಭಕ್ತಾಧಿಗಳು ಧರ್ಮಸ್ಥಳ ಪ್ರವಾಸ ಮಾಡುತ್ತಾರೆ ಕೆ.ಎಸ್ ಆರ್ ಟಿ.ಸಿ ಯಿಂದ ಬಸ್ ಸೌಲಭ್ಯ ಒದಗಿಸಬೇಕು. ಚಡಚಣ ಹಾಗೂ ಇಂಡಿತಾಲೂಕಿನ ಜನರ ನಿಕಟ ಸಂಪರ್ಕವಿದ್ದು ಬಟ್ಟೆ ವ್ಯಾಪಾರ ವೈವಾಟು ಮಾಡಲು ಸಾಕಷ್ಟು ಜನರು ಚಡಚಣ ತಾಲೂಕಿಗೆ ಹೋಗುತ್ತಾರೆ ಆದರೆ ರಾತ್ರಿ ೮ ಆದರೆ ಚಡಚಣದಿಂದ ಇಂಡಿ ನಗರಕ್ಕೆ ಬರಲು ಯಾವುದೇ ವಾಹನಗಳ ಸೌಲಭ್ಯ ಇರುವುದಿಲ್ಲ ಹೀಗಾಗಿ ಸಾಕಷ್ಟು ತೊಂದರೆಯಾಗಿದೆ ಎಂಬ ದೂರುಗಳು ಬಂದಿರುವದರಿಂದ ಇಂಡಿಯಿಂದ ಚಡಚಣಕ್ಕೆ ರಾತ್ರಿ ೮-೩೦ ಗಂಟೆಗೆ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಕೆ.ಎಸ್ ಆರ್.ಟಿ.ಸಿ ವ್ಯವಸ್ಥಾಪಕರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಸೂಚಿಸಿದರು. ನಂತರ ವಿವಿಧ ಇಲಾಖೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ಕಡಕಭಾವಿ, ಡಿ,ವಾಯ್.ಎಸ್.ಪಿ, ಕೃಷಿ ಅಧಿಕಾರಿ ಮಹಾ ದೇವಪ್ಪ ಏವೂರ, ತೋಟಗಾರಿಕಾಧಿಕಾರಿ ಎಚ್,ಎಸ್ ಪಾಟೀಲ, ಬಿ.ಈ.ಓ ಆಲಗೂರ, ತಾಲೂಕಾ ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಎಸ್.ಆರ್ ರುದ್ರವಾಡಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಇದನ್ನೂ ಓದಿ: Vijayapura News: ರಾಮಾಯಣದಲ್ಲಿನ ಮೌಲ್ಯ ಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಿ.ಎಸ್.ಕಡಕಬಾವಿ