Thursday, 19th September 2024

ಮಾರಿಬ್ ನಗರಕ್ಕಾಗಿ ಹೋರಾಟ: 80 ಬಂಡುಕೋರರ ಸಾವು

ದುಬೈ: ಯೆಮೆನ್‌ ಭದ್ರಕೋಟೆ ಮಾರಿಬ್ ನಗರಕ್ಕಾಗಿ ನಡೆದ ಹೋರಾಟದಲ್ಲಿ ಸುಮಾರು 80 ಬಂಡುಕೋರರು ಮತ್ತು ಸರ್ಕಾರದ 18 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಬುಧವಾರ ವರದಿಯಾಗಿದೆ.

ಅವರಲ್ಲಿ ಹೆಚ್ಚಿನವರು ಕಳೆದ 24 ಗಂಟೆಗಳಲ್ಲಿ ನಡೆಸಿದ ವಾಯುದಾಳಿಯಲ್ಲಿ ಹತರಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ನಡೆದ ಘರ್ಷಣೆಯಲ್ಲಿ ಸರ್ಕಾರಿ ಪರ 18 ಸೈನಿಕರು ಹತರಾಗಿದ್ದು, ಡಜನ್‌ಗಟ್ಟಲೆ ಸೈನಿಕರು ಗಾಯಗೊಂಡಿದ್ದಾರೆ.

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಬೆಂಬಲವಿರುವ ಯೆಮೆನ್ ಸರ್ಕಾರ ಮತ್ತು ಇರಾನ್ ಮಿತ್ರಪಡೆ ಹುತಿ ಬಂಡುಕೋರರ ನಡುವಿನ ಯುದ್ಧಗಳು ಮರೀಬ್ ಪ್ರಾಂತ್ಯದಲ್ಲಿ ತೀವ್ರಗೊಂಡಿವೆ. ವಾಯು ದಾಳಿಗಳೂ ತೀವ್ರ ಗೊಂಡಿವೆ ಎಂದು ಹೆಸರು ಬಹಿರಂಗಪಡಿಸದ ಸೇನಾಧಿಕಾರಿ ಹೇಳಿದ್ದಾರೆ.

‘ಹುತಿ ಬಂಡುಕೋರರು ಮಂಗಳವಾರ ರಾತ್ರಿ ಸೇನಾ ದಾಳಿ ಆರಂಭಿಸಿದ್ದು, ಅದು ಬುಧವಾರ ಬೆಳಿಗ್ಗೆಯವರೆಗೆ ಮುಂದುವರೆಯಿತು.

ಹುತಿ ಬಂಡುಕೋರರು ಮರಿಬ್ ನಗರವನ್ನು ವಶಪಡಿಸಿಕೊಳ್ಳಲು ಫೆಬ್ರುವರಿಯಿಂದ ಪ್ರಯತ್ನ ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *