ಹಾಂಗ್‌ಕಾಂಗ್: ಸ್ಫೋಟಕಗಳ ತಯಾರಿಕೆ ಆರೋಪದಡಿ, ಆರು ಮಂದಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
15 ರಿಂದ 39 ವಯಸ್ಸಿನೊಳಗಿನ ಐದು ಮಂದಿ ಯುವಕರು ಮತ್ತು ನಾಲ್ವರು ಯುವತಿಯರನ್ನು ಬಂಧಿಸ ಲಾಗಿದೆ. ಆರೋಪಿಗಳು ಭಯೋತ್ಪದನಾ ಚಟುವಟಿಕೆ ಗಳಿಗಾಗಿ ಸ್ಫೋಟಕಗಳನ್ನು ಬಳಸಲು ಸಂಚು ಹೂಡಿದ್ದರು ಎಂದು ಶಂಕಿಸಲಾಗಿದೆ.
‘ಹಾಸ್ಟೆಲ್‌ನಲ್ಲಿ ನಿರ್ಮಿಸಿದ ಪ್ರಯೋಗಾಲಯದಲ್ಲಿ ಸ್ಫೋಟಕಗಳನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು’ ಎಂದು ಹೊಸ ರಾಷ್ಟ್ರೀಯ ಭದ್ರತಾ ಘಟಕದ ಹಿರಿಯ ಅಧೀಕ್ಷಕ ತಿಳಿಸಿದರು.
ರೈಲ್ವೆ ನೆಟ್‌ವರ್ಕ್ ಮತ್ತು ನ್ಯಾಯಾಲಯದ ಕೊಠಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು.
‘ಬಂಧಿತರಿಂದ ಸಣ್ಣ ಸ್ಫೋಟಕಗಳು, ಕಚ್ಚಾ ವಸ್ತುಗಳು, ಏರ್ ಗನ್, ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು, ಬಾಂಬ್ ಆಪರೇಟಿಂಗ್ ಮ್ಯಾನುವಲ್‌ಗಳು ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ಬಳಿಕ ಅವರು ನಗರ ತೊರೆದು ಹೋಗಲು ಯೋಜನೆ ರೂಪಿಸಿದ್ದರು’ ಎಂದು ಪೊಲೀಸರು ಮಂಗಳವಾರ ತಿಳಿಸಿದರು.