Sunday, 8th September 2024

ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ: 17 ನಾಗರಿಕರ ಸಾವು

ಕೈರೋ: ಯೆಮೆನ್‌ನಲ್ಲಿ ಹೌತಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 17 ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ನಗರ ಮಾರಿಬ್‌ನ ರೌಧಾ ನೆರೆಹೊರೆಯಲ್ಲಿರುವ ಗ್ಯಾಸ್ ಸ್ಟೇಷನ್‌ಗೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪ್ರಾಂತೀಯ ಗವರ್ನರ್‌ ಪತ್ರಿಕಾ ಕಾರ್ಯದರ್ಶಿ ಅಲಿ-ಅಲ್-ಗುಲಿಸಿ ತಿಳಿಸಿದ್ದಾರೆ.

ದಾಳಿಯಲ್ಲಿ ಕನಿಷ್ಠ 17 ನಾಗರಿಕರು ಮೃತಪಟ್ಟಿದ್ದು, ಐದು ಮಂದಿ ಗಾಯ ಗೊಂಡಿದ್ದಾರೆ ಎಂದು ಮಾಹಿತಿ ಸಚಿವ ಮೌಮರ್ ಅಲ್-ಇರ್ಯಾನಿ ತಿಳಿಸಿದ್ದಾರೆ. ಅಲ್ಲದೇ ದಾಳಿಯನ್ನು ಖಂಡಿಸುವಂತೆ ವಿಶ್ವಸಂಸ್ಥೆ ಹಾಗೂ ಅಮೆರಿಕಕ್ಕೆ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!