Thursday, 19th September 2024

ಫ್ರಾನ್ಸ್’ನ ಚರ್ಚ್ ಬಳಿ ಮಹಿಳೆ ಸೇರಿ ಮೂವರ ಶಿರಚ್ಛೇದನ

ಫ್ರಾನ್ಸ್ : ಚರ್ಚ್ ಒಂದರ ಮುಂದೆ ವ್ಯಕ್ತಿಯೊಬ್ಬ ಗುರುವಾರ ಚಾಕುವಿನಿಂದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ, ಶಿರಚ್ಛೇದನ ನಡೆಸಿದ್ದಾನೆ. ಅಲ್ಲದೇ ದಾಳಿ ತಡೆಯಲು ಬಂದ ಇಬ್ಬರ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಫ್ರೆಂಚ್ ನಗರ ನೈಸ್ ನ ಚರ್ಚ್ ವೊಂದರಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನೈಸ್ ನ ಮೇಯರ್ ಕ್ರಿಶ್ಚಿಯನ್ ಎಸ್ಟ್ರೊಸಿ ಅವರು ಈ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ಪೈಗಂಬರ್ ರನ್ನು ನಿಂದಿಸಿದ್ದರು ಎಂಬ ಕಾರಣಕ್ಕೆ ಶಿಕ್ಷಕನೋರ್ವನ ಕತ್ತು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಫ್ರಾನ್ಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿತ್ತು. ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ಪ್ರವಾದಿ ಮೊಹಮ್ಮದ್ ರ ವ್ಯಂಗ್ಯಚಿತ್ರ ಪ್ರದರ್ಶನ ನಿಲ್ಲಿಸುವುದಿಲ್ಲ ಎಂದು ದೇಶದ ಮುಂದೆ ಪ್ರತಿಜ್ಞೆ ಮಾಡಿದ್ದರು.

ಇನ್ನಿಬ್ಬರು ಚೂರಿ ಇರಿತದಿಂದ ಮೃತಪಟ್ಟಿದ್ದಾರೆ.