ಬುಡಾಪೆಸ್ಟ್ : ಹಂಗೆರಿಯ ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ವಿಕ್ಟರ್ ಓರ್ಬನ್ ಭಾರಿ ಜಯ ಸಾಧಿಸಿದ್ದು, ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದಾರೆ.
ಮತ ಎಣಿಕೆ ಮಾಹಿತಿ ಆಧರಿಸಿ, ಓರ್ಬನ್ ಅವರ ಫಿಡೆಸ್ ನೇತೃತ್ವದ ಮೈತ್ರಿಕೂಟ ಶೇ 54.5 ಮತ್ತು ಯೂರೋಪ್ ಪರ ಪ್ರತಿಪಕ್ಷಗಳ ಮೈತ್ರಿಕೂಟ ಯುನೈಟೆಡ್ ಫಾರ್ ಹಂಗೆರಿ ಶೇ 34ರಷ್ಟು ಮತ ಗಳಿಸಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಫಿಡೆಸ್ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಓರ್ಬನ್, ‘ಇದು ಪಕ್ಷಕ್ಕೆ ದೊರೆತ ಭಾರಿ ಗೆಲುವು ಎಂದು ಬಣ್ಣಿಸಿದರು.
ಭ್ರಷ್ಟಾಚಾರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಕಡೆಗಣನೆಗಾಗಿ ಯೂರೋಪ್ ಒಕ್ಕೂಟ ದಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಕ್ರೈಸ್ತ ಪ್ರಜಾಸತ್ತಾತ್ಮಕ ರಾಜಕಾರಣ, ದೇಶಭಕ್ತ ರಾಜಕಾರಣ ಗೆದ್ದಿದೆ ಎಂಬುದನ್ನು ಇಡೀ ಜಗತ್ತು ಗಮನಿಸುತ್ತಿದೆ.
ಇದು, ಇತಿಹಾಸವಲ್ಲ, ಭವಿಷ್ಯ ಎಂದು ನಾವು ಯೂರೋಪ್ಗೆ ತಿಳಿಸಲು ಬಯಸುತ್ತೇವೆ ಎಂದು ಓರ್ಬನ್ ಹೇಳಿದರು.