Sunday, 8th September 2024

ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ: 12 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 12 ಮಂದಿ ಮೃತಪಟ್ಟಿದ್ದಾರೆ.

ಭೂಕಂಪದ ತೀವ್ರತೆ 5.3 ಆಗಿತ್ತು. ಭೂಕಂಪದಲ್ಲಿ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ.

ಪಶ್ಚಿಮ ಪ್ರಾಂತ್ಯದ ಬದ್ಸ್‌​ಗೀಸ್​ನ ಖಾದಿಸ್ ಜಿಲ್ಲೆಯಲ್ಲಿ 5.6 ತೀವ್ರತೆಯ ಭೂಕಂಪನ ಉಂಟಾಗಿದೆ. ಇದರಿಂದ ಮನೆಗಳ ಮೇಲ್ಚಾವಣಿ ಕುಸಿದ ಘಟನೆಗಳಲ್ಲಿ 12 ಮಂದಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಗವರ್ನರ್ ಮೊಹಮ್ಮದ್ ಸಲೇಹ್ ಪುರ್​ಡೆಲ್​ ತಿಳಿಸಿದ್ದಾರೆ.

ಇದೇ ಜನವರಿ 1 ರಂದು 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಫ್ಘಾನಿಸ್ತಾನ-ತಜಕಿಸ್ತಾನ ಗಡಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್​ ಮಾಪಕದಲ್ಲಿ ಕಂಪನದ ತೀವ್ರತೆ 5.1ರಷ್ಟು ದಾಖಲಾಗಿತ್ತು.

ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ ಸಂಜೆ 6.45ಕ್ಕೆ ಭೂಕಂಪನದ ಅನುಭವವಾಗಿದೆ. ಹಾಗೇ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ನಿಯಂತ್ರಣ ರೇಖೆಯ ಸುತ್ತಲಿನ ಇತರ ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿತ್ತು.

error: Content is protected !!