ಭೂಕಂಪದಿಂದ ವ್ಯಾಪಕ ಹಾನಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಕಂಪನ ಸುಮಾರು 10 ಕಿಲೋಮೀಟರ್ (6.21 ಮೈಲು) ಆಳದಲ್ಲಿ ಸಂಭವಿಸಿದೆ ಎಂದು ಇಎಂಎಸ್‍ಸಿ ಅಂದಾಜಿಸಿದೆ. ಇರಾನ್‍ನಲ್ಲಿ ಭೂಕಂಪ ಸಂಭವಿಸಿದ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ ಕಂಪನದ ಅನುಭವವಾಗಿದೆ.
ದಕ್ಷಿಣ ಇರಾನ್‍ನಲ್ಲಿ ಮಧ್ಯರಾತ್ರಿ ಬಳಿಕ 1.32ರ ಸುಮಾರಿಗೆ ಭೂಕಂಪ ಸಂಭವಿಸಿತು. 6.3 ತೀವ್ರತೆಯ ಭೂಕಂಪ ಸೇರಿದಂತೆ ಎರಡು ಭೂಕಂಪಗಳು ಅನುಭವಕ್ಕೆ ಬಂದಿವೆ ಎಂದು ಗಲ್ಫ್‍ನ್ಯೂಸ್ ಹೇಳಿದೆ. ಎರಡನೇ ಭೂಕಂಪ 3.24ಕ್ಕೆ ಸಂಭವಿಸಿದೆ.
ಎರಡು ಭೂಕಂಪಗಳ ನಡುವೆ 4.6 ಮತ್ತು 4.4 ತೀವ್ರತೆಯ ಕಂಪನಗಳು 2.43 ಮತ್ತು 3.13ಕ್ಕೆ ಅನುಭವಕ್ಕೆ ಬಂದಿವೆ ಎಂದು ತಿಳಿಸಿದೆ.