Eve Jobs Wedding: ಸ್ಟೀವ್ ಜಾಬ್ಸ್ ಪುತ್ರಿಯ ಮದ್ವೆಗೆ ಭರ್ಜರಿ ತಯಾರಿ; ವರನಾರು ಗೊತ್ತೇ?
ಆಪಲ್ ಕಂಪೆನಿಯ ಸಹ ಸಂಸ್ಥಾಪಕ ( Apple co-founder ) ಸ್ಟೀವ್ ಜಾಬ್ಸ್ (Steve Jobs) ಅವರ ಕಿರಿಯ ಪುತ್ರಿ ಈವ್ ಜಾಬ್ಸ್ (Eve Jobs Wedding) ಈ ವರ್ಷದ ಆಗಸ್ಟ್ನಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈವ್ ಜಾಬ್ಸ್ ಅವರು 2023ರಿಂದ ಡೇಟಿಂಗ್ ನಡೆಸುತ್ತಿರುವ ಗೆಳೆಯ ಹ್ಯಾರಿ ಚಾರ್ಲ್ಸ್ (Harry Charles) ಜೊತೆ ಇಂಗ್ಲೆಂಡ್ನ (England) ಗ್ರಾಮಾಂತರ ಪ್ರದೇಶವಾದ ಕೋಟ್ಸ್ವೋಲ್ಡ್ಸ್ನಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ.


ಕ್ಯಾಲಿಫೋರ್ನಿಯ: ಆಪಲ್ ಕಂಪೆನಿಯ ಸಹ ಸಂಸ್ಥಾಪಕ ( Apple co-founder ) ಸ್ಟೀವ್ ಜಾಬ್ಸ್ (Steve Jobs) ಅವರ ಕಿರಿಯ ಪುತ್ರಿ ಈವ್ ಜಾಬ್ಸ್ (Eve Jobs Wedding) ಈ ವರ್ಷದ ಆಗಸ್ಟ್ನಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈವ್ ಜಾಬ್ಸ್ ಅವರು 2023ರಿಂದ ಡೇಟಿಂಗ್ ನಡೆಸುತ್ತಿರುವ ಗೆಳೆಯ ಹ್ಯಾರಿ ಚಾರ್ಲ್ಸ್ (Harry Charles) ಜೊತೆ ಇಂಗ್ಲೆಂಡ್ನ (England) ಗ್ರಾಮಾಂತರ ಪ್ರದೇಶವಾದ ಕೋಟ್ಸ್ವೋಲ್ಡ್ಸ್ನಲ್ಲಿ ಅದ್ದೂರಿಯಾಗಿ ವಿವಾಹವಾಗಲಿದ್ದಾರೆ. ಕುದುರೆ ಸವಾರಿ ಪಟುವಾಗಿರುವ ಹ್ಯಾರಿ ಚಾರ್ಲ್ಸ್ 2024ರ ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್ನ ಶೋ ಜಂಪಿಂಗ್ ವಿಭಾಗದಲ್ಲಿ ಚಿನ್ನ ಗೆದ್ದ ಬ್ರಿಟಿಷ್ ತಂಡದ ಭಾಗವಾಗಿದ್ದರು.
ಹ್ಯಾರಿ ಚಾರ್ಲ್ಸ್ ಮತ್ತು ಈವ್ ಜಾಬ್ಸ್ ಪರಸ್ಪರ ಡೇಟಿಂಗ್ ನಡೆಸುತ್ತಿರುವುದನ್ನು 2024 ರ ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ಘೋಷಿಸಿದ್ದರು. ಆಪಲ್ ಸಂಸ್ಥಾಪಕ ಮತ್ತು ಸಿಇಒ ಸ್ಟೀವ್ ಜಾಬ್ಸ್ ಮತ್ತು ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರ ಕಿರಿಯ ಮಗಳಾಗಿರುವ 26 ವರ್ಷದ ಈವ್ ಜಾಬ್ಸ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಪದವೀಧರೆಯಾಗಿದ್ದು, ವೃತ್ತಿಯಲ್ಲಿ ರೂಪದರ್ಶಿಯಾಗಿದ್ದಾರೆ. ಇವರು 2021ರಿಂದ ಮಾಡೆಲಿಂಗ್ ನಡೆಸುತ್ತಿದ್ದು, ಮೊದಲ ಬಾರಿಗೆ ಫ್ಯಾಷನ್ ಲೇಬಲ್ ಕೋಪರ್ನಿಯೊಂದಿಗೆ ವೃತ್ತಿ ಬದುಕಿಗೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ಇವರು ಲೂಯಿ ವಿಟಾನ್ಗಾಗಿ ಮಾಡೆಲಿಂಗ್ ಮಾಡುತ್ತಿದ್ದಾರೆ. ಪ್ಯಾರಿಸ್ ಫ್ಯಾಷನ್ ವೀಕ್ನಲ್ಲೂ ಕಾಣಿಸಿಕೊಂಡಿದ್ದರು.
ಹ್ಯಾರಿ ಚಾರ್ಲ್ಸ್ ಮತ್ತು ಈವ್ ಜಾಬ್ಸ್ 2023 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದು 2024 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿರುವ ಹ್ಯಾರಿ ಚಾರ್ಲ್ಸ್ ಮತ್ತು ಈವ್ ಜಾಬ್ಸ್ ಅವರ ವಿವಾಹ ಸಮಾರಂಭವನ್ನು 'ಈ ವರ್ಷದ ಅದ್ದೂರಿ ವಿವಾಹ' ಎಂದು ಗುರುತಿಸಲಾಗಿದೆ. ಯಾಕೆಂದರೆ ಇವರ ವಿವಾಹ ಸಮಾರಂಭದಲ್ಲಿ ವಿಶ್ವದ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈವ್ ಜಾಬ್ಸ್ ಈ ಹಿಂದೆ ಸಂಗೀತಗಾರ ಹ್ಯಾರಿ ಹಡ್ಸನ್ ಮತ್ತು ದಿ ಚೈನ್ಸ್ಮೋಕರ್ಸ್ನ ಡ್ರೂ ಟ್ಯಾಗರ್ಟ್ ಅವರೊಂದಿಗೆ ಡೇಟಿಂಗ್ ನಡೆಸಿದ್ದರು. ಡ್ರೂ ಟ್ಯಾಗರ್ಟ್ ಸೆಲೆನಾ ಗೊಮೆಜ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ವಂದತಿಯ ಬಳಿಕ ಈವ್ ಮತ್ತು ಡ್ರೂ ಟ್ಯಾಗರ್ಟ್ ಸಂಬಂಧ ಮುರಿದು ಬಿದ್ದಿತ್ತು.
ಮದುವೆ ಯಾವಾಗ ನಡೆಯಲಿದೆ?
ಈವ್ ಜಾಬ್ಸ್ ಮತ್ತು ಹ್ಯಾರಿ ಚಾರ್ಲ್ಸ್ ಅವರ ವಿವಾಹ ಆಗಸ್ಟ್ನಲ್ಲಿ ಇಂಗ್ಲೆಂಡ್ನ ಗ್ರಾಮಾಂತರ ಪ್ರದೇಶವಾದ ಕೋಟ್ಸ್ವೋಲ್ಡ್ಸ್ನಲ್ಲಿ ನಡೆಯಲಿದೆ. ಆದರೆ ಮದುವೆಯ ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಆಕ್ಸ್ಫರ್ಡ್ನಿಂದ ಸುಮಾರು 60-70 ಕಿ.ಮೀ. ದೂರದಲ್ಲಿರುವ ಕೋಟ್ಸ್ವೋಲ್ಡ್ಸ್ ಒಂದು ಸುಂದರವಾದ ಗ್ರಾಮೀಣ ಪ್ರದೇಶವಾಗಿದೆ. ಇದು ಹಸಿರು ಬೆಟ್ಟಗಳಿಗೆ ಹೆಸರುವಾಸಿಯಾಗಿದ್ದು, ಶ್ರೀಮಂತ ಮತ್ತು ಪ್ರವಾಸಿಗರ ಸ್ವರ್ಗವಾಗಿದೆ. ಇಲ್ಲಿ ಸೆಲೆಬ್ರಿಟಿಗಳಾದ ಡೇವಿಡ್ ಮತ್ತು ವಿಕ್ಟೋರಿಯಾ ಬೆಕ್ಹ್ಯಾಮ್ ಒಂದು ಎಸ್ಟೇಟ್ ಹೊಂದಿದ್ದಾರೆ. ಮಾತ್ರವಲ್ಲದೆ ಎಲೆನ್ ಡಿಜೆನೆರೆಸ್, ಕೇಟ್ ಮಾಸ್, ಎಲಿಜಬೆತ್ ಹರ್ಲಿ ಮತ್ತು ಹಗ್ ಗ್ರಾಂಟ್ ಕೂಡ ಇಲ್ಲಿ ಸುಂದರ ಮತ್ತು ಶ್ರೀಮಂತವಾದ ಮನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಮದುವೆಗೆ ಯಾರೆಲ್ಲ ಸಾಕ್ಷಿಯಾಗುವರು?
ಹ್ಯಾರಿ ಚಾರ್ಲ್ಸ್ ಮತ್ತು ಈವ್ ಜಾಬ್ಸ್ ವಿವಾಹದಲ್ಲಿ ಈವ್ ಜಾಬ್ಸ್ ಅವರ ತಾಯಿ ಲಾರೆನ್ ಪೊವೆಲ್ ಜಾಬ್ಸ್ ಅವರ ಆಪ್ತ ಸ್ನೇಹಿತೆಯಾಗಿರುವ ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾಗವಹಿಸುವ ನಿರೀಕ್ಷೆಯಿದೆ. ಪ್ರಿನ್ಸೆಸ್ ಬ್ರಿಟಿಷ್ ಮತ್ತು ಅವರ ಪತಿ ಎಡೋರ್ಡೊ ಮಾಪೆಲ್ಲಿ ಮೊಝಿ ಅವರನ್ನೊಳಗೊಂಡ ಬ್ರಿಟಿಷ್ ರಾಜಮನೆತನದ ಪರಿವಾರವು ಈ ವಿವಾಹದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೇ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಪುತ್ರಿ ಜೆನ್ನಿಫರ್ ಮತ್ತು ಫೋಬೆ ಗೇಟ್ಸ್ ಕೂಡ ಭಾಗವಹಿಸಬಹುದು. ಇದರೊಂದಿಗೆ ಈವ್ ಜಾಬ್ಸ್ ಅವರ ಸಹೋದರರಾದ ರೀಡ್ ಜಾಬ್ಸ್, ಎರಿನ್ ಜಾಬ್ಸ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ.