ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪಾಕಿಸ್ತಾನದ ನಡು ಬೀದಿಯಲ್ಲಿ ಯುವತಿಯರ ಮೇಲೆ ಇದೆಂಥಾ ದೌರ್ಜನ್ಯ? ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಪಾಕಿಸ್ತಾನದ ಜನನಿಬೀಡ ರಸ್ತೆಯಲ್ಲಿ ಜೀನ್ಸ್ ಮತ್ತು ಟಾಪ್ ಧರಿಸಿ ಹಿಜಾಬ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರ ಮೇಲೆ ಪುರುಷರ ಗುಂಪೊಂದು ದೌರ್ಜನ್ಯ ನಡೆಸಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿ ಪಾಕಿಸ್ತಾನದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಪಾಕ್‌ ಬೀದಿಯಲ್ಲಿ ಯುವತಿಯರ ಮೇಲೆ ಡೆಡ್ಲಿ ಅಟ್ಯಾಕ್‌!

Profile pavithra Jun 6, 2025 4:42 PM

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜನನಿಬೀಡ ರಸ್ತೆಯಲ್ಲಿ ಇಬ್ಬರು ಯುವತಿಯರ ಮೇಲೆ ಪುರುಷರ ಗುಂಪೊಂದು ದೈಹಿಕವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿದೆ. ವಿಡಿಯೊದಲ್ಲಿ ಇಬ್ಬರು ಯುವತಿಯರು ಜೀನ್ಸ್ ಮತ್ತು ಟಾಪ್ ಧರಿಸಿ ಜನನಿಬೀಡ ರಸ್ತೆಯಲ್ಲಿ ಹಿಜಾಬ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದಾಗ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ದೈಹಿಕವಾಗಿ ಹಲ್ಲೆ ನಡೆಸಿರುವುದು ಸೆರೆಯಾಗಿದೆ.ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಇಲ್ಲಿಯವರೆಗೆ, ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಪೊಲೀಸ್ ಪ್ರತಿಕ್ರಿಯೆ ಅಥವಾ ಕ್ರಮ ವರದಿಯಾಗಿಲ್ಲ.

ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪಾಕಿಸ್ತಾನದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ" ಎಂದು ಒಬ್ಬ ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು "ಪ್ರಾಣಿಗಳು ಸಹ ಈ ರೀತಿ ವರ್ತಿಸುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸರಿಯಾದ ರಕ್ಷಣೆ ನೀಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ವಿಡಿಯೊ ನೋಡಿ...



ಈ ಸುದ್ದಿಯನ್ನೂ ಓದಿ:‌Viral Video: ಶಾಪಿಂಗ್‌ ಮಾಲ್‌ಗೆ ನುಗ್ಗಿದ ಗಜರಾಜ; ಈ ವಿಡಿಯೊ ನೋಡಿದ್ರೆ ಎದೆ ಝಲ್ಲೆನ್ನೋದು ಗ್ಯಾರಂಟಿ

ಇತ್ತೀಚೆಗೆ ಲಾಹೋರ್‌ನಲ್ಲಿ ಮಹಿಳೆಯೊಬ್ಬಳನ್ನು ಧರ್ಮನಿಂದನೆಯ ಆರೋಪದ ಮೇಲೆ ರೆಸ್ಟೋರೆಂಟ್‌ನೊಳಗೆ ಗುಂಪು ಕಟ್ಟಿಕೊಂಡು ದರೋಡೆ ಮಾಡಿದ ಘಟನೆ ಈ ಹಿಂದೆ ನಡೆದಿತ್ತು. ಆಕೆಯ ಕುರ್ತಾದಲ್ಲಿ ಅರೇಬಿಕ್ ಲಿಪಿಯನ್ನು ಬರೆಯಲಾಗಿತ್ತು. ಕೆಲವರು ಇದನ್ನು ಕುರಾನ್ ಪದ್ಯಗಳೆಂದು ತಪ್ಪಾಗಿ ಭಾವಿಸಿದ್ದರು. ಕೊನೆಗೆ ಮಹಿಳಾ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಆಕೆಯನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದ ಆಕೆಯನ್ನು ರಕ್ಷಿಸಿದ್ದಾರೆ.